ವೈಟ್ ಕಲರ್ ಲೆಹೆಂಗಾದಲ್ಲಿ ಅಪ್ಸರೆಯಂತೆ ಮಿಂಚಿದ ರಾಧಿಕಾ ಪಂಡಿತ್

public wpadmin

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಅವರು ವೈಯಕ್ತಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅದೆಷ್ಟೇ ಬ್ಯುಸಿಯಾಗಿದ್ರೂ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ನಟಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ರಾಧಿಕಾ ಚೆಂದದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ವೈಟ್ ಕಲರ್ ಲೆಹೆಂಗಾದಲ್ಲಿ ಅವರು ರಾಧಿಕಾ ಪಂಡಿತ್ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ನೆಚ್ಚಿನ ನಟಿಯ ಚೆಂದದ ಲುಕ್ ನೋಡಿ ‘ರಾಜಕುಮಾರಿ’ ಎಂದು ರಾಧಿಕಾರನ್ನು ಫ್ಯಾನ್ಸ್ ಬಣ್ಣಿಸಿದ್ದಾರೆ. ಒಟ್ನಲ್ಲಿ ರಾಧಿಕಾ ನಯಾ ಲುಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. 

ಅಂದಹಾಗೆ, ಪತಿ ಯಶ್ (Yash) ಇಂದು ನ್ಯಾಷನಲ್ ಸ್ಟಾರ್ ಆಗಿ ಹೆಸರು ಮಾಡಿರೋದ್ದಕ್ಕೆ ನಟನ ಪರಿಶ್ರಮದ ಜೊತೆ ರಾಧಿಕಾ (Radhika) ಬೆಂಬಲ ಕೂಡ ಸಾಕಷ್ಟಿದೆ. ಯಶ್ ಪ್ರತಿ ಹೆಜ್ಜೆಯಲ್ಲೂ ರಾಧಿಕಾ ಜೊತೆಯಾಗಿ ಸಾಥ್ ನೀಡುತ್ತಲೇ ಬಂದಿದ್ದಾರೆ. ಯಶ್ ಕೂಡ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ನನ್ನ ಯಶಸ್ಸಿಗೆ ಪತ್ನಿಯೇ (Wife) ಶಕ್ತಿ ಎಂದು ರಾಧಿಕಾ ಅವರ ಬೆಂಬಲದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

Share This Article
Leave a comment