ವಿಜಯ್ ಗೋಟ್ ಚಿತ್ರದ ಮಟ್ಟಾ ಹಾಡಿಗೆ ಥಿಯೇಟರ್ ನಲ್ಲೇ ಪ್ರೇಕ್ಷಕರು ಹುಚ್ಚೆದ್ದು ಕುಣೀತಿದ್ದಾರೆ. ವಿಜಯ್ ಜೊತೆ ಡ್ಯಾನ್ಸ್ ಮಾಡುವ ಆಫರ್ ತ್ರಿಶಾಗೂ ಮೊದಲು ಈ ಕನ್ನಡದ ನಟಿಗೆ ಸಿಕ್ಕಿತ್ತು. ಆದ್ರೆ ಈ ಬ್ಯೂಟ ಸಿಕ್ಕ ಆಫರ್ ರಿಜೆಕ್ಟ್ ಮಾಡಿದ್ದಾರೆ.
ವಿಜಯ್ ಅಭಿನಯದ ‘ದಿ ಗೋಟ್’ ಚಿತ್ರಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಥಿಯೇಟರ್ ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ಕಥೆ, ಸಸ್ಪೆನ್ಸ್ ವಿಜಯ್ ಅಭಿಮಾನಿಗಳ ಮನಗೆದ್ದಿದೆ. ನಿರ್ದೇಶಕ ವೆಂಕಟ್ ಪ್ರಭು ಅವರನ್ನು ಫ್ಯಾನ್ಸ್ ಕೊಂಡಾಡಿದ್ದಾರೆ.
ವಿಜಯ್-ತ್ರಿಶಾ ಜೋಡಿ ತೆರೆ ಮೇಲೆ ಮ್ಯಾಜಿಕ್ ಮಾಡಿದೆ. ಅನೇಕರ ಫೇವರಿಟ್ ಜೋಡಿ ಆಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್-ತ್ರಿಷಾ ಅಭಿನಯದ ‘ಲಿಯೋ’ ಸಿನಿಮಾ ಮಾಸ್ ಹಿಟ್ ಆಯಿತು. ವಿಜಯ್ ಪಾಲಿಗೆ ತ್ರಿಶಾ ಲಕ್ಕಿ ಹೀರೋಯಿನ್ ಅಂದ್ರೆ ತಪ್ಪಾಗೋದಿಲ್ಲ. ಗೋಟ್ ಸಿನಿಮಾದಲ್ಲೂ ತ್ರಿಶಾ ಕಾಣಿಸಿಕೊಂಡು ವಿಜಯ್ ಫ್ಯಾನ್ಸ್ಗೆ ಕಿಕ್ ನೀಡಿದ್ದಾರೆ.
ನಿರ್ದೇಶಕ ವೆಂಕಟ್ ಪ್ರಭು ವಿಜಯ್ ಅಭಿಮಾನಿಗಳನ್ನು ಹುರಿದುಂಬಿಸಲು ನಟಿ ತ್ರಿಶಾ ಅವರನ್ನು ‘ಗೋಟ್’ ಚಿತ್ರಕ್ಕೂ ಕರೆತಂದಿದ್ರು. ‘ಮಟ್ಟ’ ಹಾಡಿಗೆ ವಿಜಯ್-ತ್ರಿಶಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಸ್ಕ್ರೀನ್ ಸ್ಪೆಷಲ್ ಸಾಂಗ್ ಬರ್ತಿದ್ದಂತೆ. ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಸ್ಪೆಷಲ್ ಸಾಂಗ್ಗಾಗಿ ನಿರ್ದೇಶಕರ ಮೊದಲ ಆಯ್ಕೆ ಕನ್ನಡದ ನಟಿ ಶ್ರೀಲೀಲಾ ಆಗಿದ್ರು. ಆದ್ರೆ ವಿಜಯ್ ಜೊತೆ ಹಾಡಿಗೆ ಹೆಜ್ಜೆ ಹಾಕಲು ಭರಾಟೆ ಬ್ಯೂಟಿ ಒಪ್ಪಲಿಲ್ಲ. ಈ ಚಾನ್ಸ್ ನಟಿ ತ್ರಿಶಾ ಪಾಲಾಯ್ತು. ಸ್ಪೆಷಲ್ ಸಾಂಗ್ಗೆ ಸೊಂಟ ಕುಣಿಸಲು ನಟಿ ಶ್ರೀಲೀಲಾ ಒಪ್ಪಲಿಲ್ಲ.
ಹಳದಿ ಸೀರೆಯುಟ್ಟ ತ್ರಿಶಾ, ವಿಜಯ್ ಜೊತೆಗಿನ ‘ಮಟ್ಟ’ ಹಾಡಿಗೆ ಸೊಂಟ ಕುಣಿಸಿದ್ದಾರೆ. ಈ ಹಾಡು ಥಿಯೇಟರ್ ನಲ್ಲಿ ಭರ್ಜರಿ ಶಿಳ್ಳೆಗಳನ್ನು ಗಿಟ್ಟಿಸಿಕೊಂಡಿದೆ.
‘ಗೋಟ್’ ಚಿತ್ರದ ‘ಮಟ್ಟ’ ಹಾಡಿನಲ್ಲಿ ವಿಜಯ್ ಜೊತೆ ಡ್ಯಾನ್ಸ್ ಮಾಡಿದ್ದಕ್ಕೆ ತ್ರಿಶಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಮಾಹಿತಿ ಪ್ರಕಾರ ‘ಮಟ್ಟ’ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ 4 ರಿಂದ 5 ಕೋಟಿ ಪಡೆದಿದ್ದಾರಂತೆ. ಸಂಭಾವನೆ ಮಾಹಿತಿ ಹೊರಬಿದ್ದಿದ್ದು ಸುದ್ದಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.