ಪ್ರತಿಯೊಬ್ಬರ ಜೀವನಶೈಲಿಯು ಭಿನ್ನ-ಭಿನ್ನವಾಗಿದೆ. ಬಹುತೇಕ ಮಂದಿ ಕೇವಲ 6 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಾರೆ. ಇಂತಹವರು ಕೆಲಸದ ಸಮಯದಲ್ಲಿ ಕೂಡ ನಿದ್ರಿಸುತ್ತಿರುತ್ತಾರೆ. ಇಂತವರು ನಿದ್ತೆ ಅವೈಡ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ..
ಅನೇಕ ಮಂದಿ ಬೆಳಗ್ಗೆ ಉಪಾಹಾರಕ್ಕಾಗಿ ಸೇವಿಸಿದ ಆಹಾರವನ್ನೇ ಮಧ್ಯಾಹ್ನ ಊಟವಾಗಿ ತಿನ್ನುತ್ತಾರೆ. ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೇ ರೀತಿಯ ಆಹಾರವನ್ನು ಸೇವಿಸಿದರೆ ನಿದ್ರೆ ಬರುವ ಸಾಧ್ಯತೆ ಹೆಚ್ಚು. ಇನ್ನು ಕರಿದ ಆಹಾರವನ್ನು ಸಾಧ್ಯವಾದಷ್ಟು ಬಿಡಬೇಕು. ಇವು ತಿನ್ನಲು ಟೇಸ್ಟಿ ಆಗಿರುತ್ತದೆ. ಆದರೆ ಜೀರ್ಣಾವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಮೆದುಳು ನಿಶ್ಚೇಷ್ಟಿತವಾಗುತ್ತದೆ. ಆದ್ದರಿಂದ ನಿದ್ರಿಸುವ ಸಾಧ್ಯತೆಗಳು ಸಹ ಹೆಚ್ಚು.
ಇನ್ನು ಅನ್ನ ಗ್ಲೂಕೋಸ್ ಆಗಿ ಬದಲಾಗುತ್ತದೆ. ಪರಿಣಾಮವಾಗಿ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಆಗ ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಪ್ರಮಾಣ ಹೆಚ್ಚುತ್ತದೆ. ಈ ಎರಡು ಹಾರ್ಮೋನ್ಗಳು ದೇಹಕ್ಕೆ ವಿಶ್ರಾಂತಿ ನೀಡಿ ನಿದ್ರೆಯನ್ನುಂಟು ಮಾಡುತ್ತದೆ. ಹಾಗಾಗಿಯೇ ಅನೇಕ ಮಂದಿ ಊಟದ ನಂತರ ನಿದ್ರಿಸುತ್ತಾರೆ.
ಹೆಚ್ಚಿನ ಪ್ರೋಟೀನ್ ಆಹಾರಗಳಾದ ಹಾಲು, ಲೆಟಿಸ್, ಬೀಜಗಳು, ಸೋಯಾ ಉತ್ಪನ್ನಗಳು, ಚಿಕನ್ ಅನ್ನು ಕೆಲಸದ ಸ್ಥಳದಲ್ಲಿ ತಪ್ಪಿಸಬೇಕು. ಇಲ್ಲದಿದ್ದರೆ, ಮನಸ್ಸಿಗೆ ಅಮಲು, ತಲೆತಿರುಗುವಿಕೆ ಬರುವ ಸಾಧ್ಯತೆ ಇರುತ್ತೆ. ಅಲ್ಲದೇ, ಕೆಲಸದಲ್ಲಿ ಕ್ರಿಯಾಶೀಲರಾಗಬೇಕಾದರೆ ಸಿಹಿಗೆ ಗುಡ್ ಬೈ ಹೇಳಲೇಬೇಕು.