ದಾವಣಗೆರೆ: ಮದುವೆ ಸಂಭ್ರಮದಲ್ಲಿರಬೇಕಾದ 26 ವರ್ಷದ ಇಬ್ಬರು ಜೈನ ಸಮುದಾಯದ ಯುವತಿಯರು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ.
ದಾವಣಗೆರೆ ಮೂಲದ ಯುವತಿ ಮಾನಸಿ ಕುಮಾರಿ ಹಾಗೂ ಗೋಕಾಕ್‍ನ ಮುಮುಕ್ಷ ಭಕ್ತಿ ಕುಮಾರಿಯವರು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ. ಮಾನಸಿ ಕುಮಾರಿ ಎಂಎ ಸೈಕಾಲಜಿ ವ್ಯಾಸಾಂಗ ಮಾಡಿದ್ದು, ಮುಮುಕ್ಷ ಭಕ್ತಿ ಕುಮಾರಿ ಎಲ್‍ಎಲ್‍ಬಿ ವ್ಯಾಸಾಂಗ ಮಾಡಿದ್ದಾರೆ.
ಮುಂದಿನ ತಿಂಗಳು 17ರಂದು ಜಾರ್ಖಂಡ್ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ನಡೆದಿದೆ. ಲೌಕಿಕ ಜೀವನ ತೊರೆದು ಅಲೌಕಿಕ ಜೀವನದತ್ತ ಮುಖ ಮಾಡಿದ ಯುವತಿಯರನ್ನು ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಇಬ್ಬರು ಕುಟುಂಬಸ್ಥರಿಂದ ಹಾಗೂ ಜೈನ ಸಮುದಾಯದಿಂದ ಔತಣ ಕೂಟ ಏರ್ಪಡಿಸಲಾಗಿತ್ತು.