ಬೈರುತ್: ಲೆಬನಾನ್‌ನಾದ್ಯಂತ ಏಕಕಾಲದಲ್ಲಿ ಪೇಜರ್‌ಗಳ ಸ್ಫೋಟದ ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 2,750 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 200 ಮಂದಿಗೆ ಗಂಭೀರ ಗಾಯಗಳಾಗಿವೆ.
ಪೇಜರ್‌ಗಳ ಸ್ಫೋಟವು ಇಸ್ರೇಲ್‌ನೊಂದಿಗೆ ಸುಮಾರು ಒಂದು ವರ್ಷದ ಯುದ್ಧದಲ್ಲಿ ಗುಂಪು ಅನುಭವಿಸಿದ ದೊಡ್ಡ ಭದ್ರತಾ ಉಲ್ಲಂಘನೆ ಎಂದು ಹೆಜೊಲ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಗಾಜಾ ಯುದ್ಧವು ಸ್ಫೋಟಗೊಂಡ ನಂತರ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜೊಲ್ಲಾ ಗಡಿಯಾಚೆಗಿನ ಯುದ್ಧದಲ್ಲಿ ತೊಡಗಿಸಿಕೊಂಡಿದೆ.
ಸ್ಫೋಟಗಳ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲಿ ಮಿಲಿಟರಿ ನಿರಾಕರಿಸಿದೆ. ಲೆಬನಾನ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಧ್ವಂಸವಾಗಿದ್ದು, ರಾಯಭಾರಿ ಮೊಜ್ಜಾಬಾ ಅಮಾನಿ ಅವರು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ತಿಳಿಸಿದೆ.