ಲವ್ ಸ್ಟೋರಿ ಶುರು ಮಾಡಿದ್ರೆ, ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ: ಚೈತ್ರಾ

public wpadmin

ಬಿಗ್ ಬಾಸ್ ಮನೆಯ ಆಟ 4ನೇ ವಾರಕ್ಕೆ ಕಾಲಿಟ್ಟ ಇಟ್ಟಿದೆ. ದೊಡ್ಮನೆಯಲ್ಲಿ ಈ ಬಾರಿಯೂ ಕೆಲ ಲವ್ ಸ್ಟೋರಿಗಳು ಸದ್ದು ಮಾಡುತ್ತಿವೆ. ಇನ್ನೂ ಚೈತ್ರಾ ಕುಂದಾಪುರ ಸಹ ಸ್ಪರ್ಧಿಗಳ ಮೇಲೆ ಗರಂ ಆಗಿದ್ದಾರೆ. ಲವ್ ಸ್ಟೋರಿ ಶುರು ಮಾಡಿದ್ರೆ, ಬೇರೆ ಅವರೊಂದಿಗೆ ಸಂಬಂಧ ಕಟ್ಟಿದ್ರೆ ಮೆಟ್ಟು ತೆಗೆದುಕೊಂಡು ಬಾರಿಸುತ್ತೇನೆ ಎಂದು ಚೈತ್ರಾ ವಾರ್ನಿಂಗ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯ ಬೆಡ್ ರೂಮ್ ಏರಿಯಾದಲ್ಲಿ ಚೈತ್ರಾ ಕುಂದಾಪುರ, ಹಂಸ ಮತ್ತು ಮಾನಸಾ ಇದ್ದರು. ಈ ವೇಳೆ, ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಲವ್ ಸ್ಟೋರಿಗಳ ಬಗ್ಗೆ ಚರ್ಚೆ ಶುರುವಾಯಿತು. ಆಗ ತ್ರಿವಿಕ್ರಮ್ (Trivikram) ಮತ್ತು ರಂಜಿತ್ ಜೊತೆ ಲವ್ ಸ್ಟೋರಿ ಇದೆ ಎಂದು ಹಂಸ ಕುರಿತು ಸುರೇಶ್ ನೀಡಿರುವ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಆಗ ಮಾತಿನ ಮಧ್ಯೆ ಚೈತ್ರಾ, ನನ್ನ ವಿಚಾರದಲ್ಲಿ ಲವ್ ಸ್ಟೋರಿ ಶುರು ಮಾಡಿದರೆ, ಮೆಟ್ಟು ತಗೊಂಡು ಬಾರಿಸುತ್ತೇನೆ. ಹೊರಗೆ ಹೋದರೂ ತೊಂದರೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ ಖಡಕ್ ಆಗಿ ಮಾತನಾಡಿದ್ದಾರೆ.ಈ ಮೂಲಕ ತಮಗೆ ಮದುವೆ ಫಿಕ್ಸ್ ಆಗಿರುವ ಬಗ್ಗೆ ಚೈತ್ರಾ ತಿಳಿಸಿದ್ದಾರೆ. ಹಾಗಾದ್ರೆ ಅವರು ಮದುವೆಯಾಗುವ ಆ ಹುಡುಗ ಯಾರು? ಮುಂದಿನ ದಿನಗಳಲ್ಲಿ ತಿಳಿಸುತ್ತಾರಾ? ಕಾದುನೋಡಬೇಕಿದೆ.

Share This Article
Leave a comment