ರಿಷಬ್ ಜೊತೆ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಜೂ. NTR

public wpadmin

ಜೂನಿಯರ್​ ಎನ್​ಟಿಆರ್ ಅಭಿನಯದ ಬಹುನಿರೀಕ್ಷಿತ ದೇವರ ಸಿನಿಮಾ ರಿಲೀಸ್ ಡೇಟ್​ ಹತ್ತಿರವಾಗ್ತಿದ್ದಂತೆ ನಟ ಉಡುಪಿಯಲ್ಲಿ ಟೆಂಪಲ್ ರನ್ ಮಾಡ್ತಿದ್ದಾರೆ. ಜೂನಿಯರ್​ ಎನ್​ಟಿಆರ್ 2 ದಿನಗಳಿಂದ  ಕರ್ನಾಟಕದಲ್ಲಿದ್ದಾರೆ.  ನಿನ್ನೆ ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಜೂನಿಯರ್​ ಎನ್​ಟಿಆರ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ್ರು. ಜೂನಿಯರ್​ ಎನ್​ಟಿಆರ್​​ಗೆ ನಟ ರಿಷಬ್ ಶೆಟ್ಟಿ, ಪ್ರಮೋದ್​ ಶೆಟ್ಟಿ ಹಾಗೂ ಪ್ರಶಾಂತ್​ ನೀಲ್​ ಕೂಡ ಸಾಥ್ ನೀಡಿದ್ರು.  

ಪ್ರೈವೆಟ್ ಜೆಟ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಜೂನಿಯರ್ ಎನ್​ಟಿಆರ್ ಅವರನ್ನು ರಿಷಬ್​ ಶೆಟ್ಟಿ ಅವರೇ ಬರಮಾಡಿಕೊಂಡ್ರು. ಉಡುಪಿಗೆ ಆಗಮಿಸಿದ ಜೂನಿಯರ್ ಎನ್​ಟಿಆರ್​, ಕೃಷ್ಣ ಮಠಕ್ಕೆ ಬಂದು ಕುಂದಾಪುರದಲ್ಲಿ ಸ್ಟೇ ಆಗಿದ್ದರು. ಜೂನಿಯರ್ ಎನ್​ಟಿಆರ್ ಕುಟುಂಬ ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದು, ದೇವಿಯ ದರ್ಶನ ಪಡೆದಿದ್ದಾರೆ.

ಮಧ್ಯಾಹ್ನ ವೇಳೆಗೆ ದೇಗುಲಕ್ಕೆ ಆಗಮಿಸಿದ ಜೂ. ಎನ್ ಟಿ ಆರ್ ಕುಟುಂಬಕ್ಕೆ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಫ್ಯಾಮಿಲಿ ಜೊತೆಯಾಗಿದೆ. ಜೂ.ಎನ್​ಟಿಆರ್ ತಾಯಿ ಶಾಲಿನಿ ನಂದಮೂರಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಗ ತಾರಕ್ ಉಡುಪಿಯ ಪ್ರಮುಖ ದೇಗುಲಗಳ ದರ್ಶನ ಮಾಡಿಸಿದ್ದಾರೆ. ಈ ಮೂಲಕ 4 ದಶಕಗಳ ಅಮ್ಮನ ಆಸೆಯನ್ನು ಈಡೇರಿಸಿದ್ದಾರೆ. ಈ ವೇಳೆ ಸಾಥ್​​ ಕೊಟ್ಟ ಗೆಳೆಯರಿಗೂ ಜೂನಿಯರ್ ಎನ್​ಟಿಆರ್​ ಥ್ಯಾಂಕ್ಸ್ ಹೇಳಿದ್ದಾರೆ.

ಮೂಕಾಂಬಿಕೆ ದರ್ಶನ ಪಡೆದು ವಿಶೇಷ ಸೇವೆಯನ್ನು ಸಲ್ಲಿಸಿದ ವೇಳೆ ಎನ್​ಟಿಆರ್ ಫ್ಯಾಮಿಲಿ ಜೊತೆ ನಟ ನಿರ್ದೇಶಕ ರಿಷಬ್ ಹಾಗೂ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬ ಜೊತೆಯಾಗಿದೆ. ಅಷ್ಟೇ ಅಲ್ಲದೇ ಜೂನಿಯರ್ ಎನ್ ಟಿ ಆರ್ ಎರಡು ದಿನ ಉಡುಪಿಯಲ್ಲಿ ಬಂದು ಉಳಿದುಕೊಂಡಿರುವ ಬಗ್ಗೆ ಸಾಕಷ್ಟು  ಪ್ರಶ್ನೆಗಳು ಹುಟ್ಟಿಕೊಂಡಿದೆ. ರಿಷಬ್ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಕಾಣಿಸಿಕೊಳ್ತಾರಾ ಎಂಬ ಚರ್ಚೆ ಆಗ್ತಿದೆ.

Share This Article
Leave a comment