ರಾಯಚೂರು: ಸಂತೋಷ್ ನಗರದಲ್ಲಿನ ಶಿಕ್ಷಣ ಇಲಾಖೆಯ ಸ್ಥಳದಲ್ಲಿ ಅನಧಿಕೃತವಾಗಿ ಶಿವನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಡಳಿತ ನೆಲಸಮ ಮಾಡಿದೆ.
ರಾಯಚೂರು ನಗರದ ಸಂತೋಷ್ ನಗರದಲ್ಲಿ ಮಧ್ಯರಾತ್ರಿ 1:30ಕ್ಕೆ 300ಕ್ಕೂ ಅಧಿಕ ಪೊಲೀಸ್ ಬಂದೋಬಸ್ತ್ನಲ್ಲಿ ಜಿಲ್ಲಾಡಳಿತ ಶಿವನ ದೇವಸ್ಥಾನವನ್ನು ನೆಲಸಮ ಮಾಡಿದೆ. ಮಧ್ಯೆರಾತ್ರಿ ಜೆಸಿಬಿಗಳು ಶಿವನ ದೇವಾಲಯವನ್ನು ಕೆಡವಿವೆ. ಶಿಕ್ಷಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ದೇವಾಲಯ ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ.
ಜಿಲ್ಲಾಧಿಕಾರಿ ನಿತೀಶ್ ದೇವಸ್ಥಾನ ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಿಕೊಂಡು ದೇವಾಲಯವನ್ನು ತೆರವು ಮಾಡಲಾಗಿದೆ. ಈ ವೇಳೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆದರೆ ಸ್ಥಳೀಯರ ಮಾತುಗಳನ್ನು ಲೆಕ್ಕಿಸಿದ ಪೊಲೀಸರು ಹಾಗೂ ಜಿಲ್ಲಾಡಳಿತ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ.