ರಾಜ್ಯ ರಾಜಕಾರಣದಲ್ಲಿ ಕೂತುಹಲ ಮೂಡಿಸಿದ ಸಿಎಂ ಆಪ್ತ ಮಹದೇವಪ್ಪ ಸತೀಶ್ ಜಾರಕಿಹೊಳಿ ಭೇಟಿ!

public wpadmin

ಮೈಸೂರು: `ಮುಂದಿನ ಸಿಎಂ ಸತೀಶ್ ಜಾರಕಿಹೊಳಿ’ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ಮೈಸೂರಿಗೆ ಆಗಮಿಸಿದ್ದು, ಸಿಎಂ ಆಪ್ತ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ರಾಜ್ಯ ರಾಜಕಾರಣದಲ್ಲಿ ಕೂತುಹಲ ಮೂಡಿಸಿದೆ.

ಇತ್ತೀಚಿಗಷ್ಟೇ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದರು. ದೆಹಲಿ ಭೇಟಿ ನಂತರ ರಾಜ್ಯ ನಾಯಕರುಗಳನ್ನು ಭೇಟಿ ಮಾಡಲಿದ್ದು, ಇಂದು ಮೈಸೂರಿನಲ್ಲಿ ಮಹದೇವಪ್ಪ, ಶಾಸಕ ಹರೀಶ್ ಗೌಡ ಸೇರಿ ಹಲವು ಶಾಸಕರ ಭೇಟಿಗೆ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ದಿಢೀರ್ ಮೈಸೂರಿಗೆ ಆಗಮಿಸಿ ಭೇಟಿಯಾಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

Share This Article
Leave a comment