ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆ: ಉತ್ಪಾದನಾ ಘಟಕಗಳಿಗೆ ನೋಟಿಸ್

public wpadmin

ಬೆಂಗಳೂರು: ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆಯಾಗಿದೆ.

ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ, ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ರಾಜ್ಯದಲ್ಲಿ ತಯಾರಾಗುವ ಖಾಸಗಿ ತುಪ್ಪದ ಮಾದರಿ ಪರೀಕ್ಷೆಗೆ ಸೂಚಿಸಿತ್ತು. ಪರೀಕ್ಷೆ ವೇಳೆ ರಾಜ್ಯದ ಎರಡು ಘಟಕಗಳಲ್ಲಿ ತಯಾರಾಗುವ ತುಪ್ಪ ಕಲಬೆರಕೆ ತುಪ್ಪ ಎಂಬುದು ಬೆಳಕಿಗೆ ಬಂದಿದೆ.

ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು. ಈ ವೇಳೆ ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಕಂಡುಬಂದಿದೆ.

ಬೆಂಗಳೂರು ಹಾಗೂ ಬಾಗಲಕೋಟೆಯ ಘಟಕದಲ್ಲಿ ತಯಾರಾಗುವ ತುಪ್ಪ ಸುರಕ್ಷಿತ ಇಲ್ಲ ಎಂಬುದು ತಿಳಿದುಬಂದಿದೆ. ಆಹಾರ ಇಲಾಖೆ ವರದಿ ಹಿನ್ನೆಲೆಯಲ್ಲಿ ಎರಡೂ ಘಟಕಗಳಿಗೆ ನೋಟಿಸ್ ನೀಡಲಾಗಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ.

ಮೈಸೂರು ಲ್ಯಾಬ್‌ನಲ್ಲಿ ಖಚಿತತೆಯ ಪರೀಕ್ಷೆ ನಡೆಸಲಾಗುತ್ತಿದೆ.

Share This Article
Leave a comment