ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ಬ್ರೇಕ್ ಅಪ್; ಅಸಲಿಗೆ ಈ ಇಬ್ಬರ ಮಧ್ಯೆ ಆಗಿದ್ದೇನು?

public wpadmin

ಚಂದನ್ ನಿವೇದಿತಾ ಡೈವರ್ಸ್ ನಂತರ ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಜಾರಾಣಿ ರೀಲೋಡೆಡ್ ಕಂಪ್ಲೀಟ್ ಆಗಿರೋ ಸಂಭ್ರಮ ಇನ್ನು ಹಸಿಯಾಗಿಯೇ ಇರುವಾಗಲೇ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್‌ ಜೋಡಿ ಬಹುಕಾಲದ ಸಂಬಂಧಕ್ಕೆ ಬ್ರೇಕ್ ಹಾಕಿದೆ ಎನ್ನಲಾಗ್ತಿದೆ. ಈ ಜೋಡಿ ರಾಜಾ ರಾಣಿ ಶೋಗೆ ಕಾಲಿಟ್ಟಾಗಿದ್ದಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಇದಕ್ಕೆ ಕಾರಣ ಅವರ ಮದುವೆ ವಿಚಾರ.
ಶಾಸ್ತ್ರೋಕ್ತವಾಗಿ ನಾವು ಮದುವೆ ಆಗಿಲ್ಲ. ಆದರೆ ಪತಿ ಪತ್ನಿ ಹೇಗೆ ಇರುತ್ತಾರೋ ನಾವು ಹಾಗೇ ಇದ್ದೀವಿ. ನಮಗೆ ಮದುವೆ ಆಗಬಾರದು ಅಂತೇನಿಲ್ಲ. ಯಾಕೋ ಮದುವೆಗೆ ಟೈಮ್ ಕೂಡಿ ಬಂದಿಲ್ಲ ಅಂತ ಹೇಳಿಕೊಂಡಿದ್ರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಜಾರಾಣಿ ಶೋನಲ್ಲಿ ಫ್ಯಾಮಿಲಿ ರೌಂಡ್ ಅಂತ ಬಂದಾಗ ನಿಶ್ಚಿತಾರ್ಥದ ಕಾರ್ಯಕ್ರಮಗಳು ಜರುಗಿದ್ವು. ಹ್ಯಾಪಿ ಜೋಡಿ, ಕ್ಯೂಟ್ ಕಪಲ್ ಅಂತ ಕರಿಸಿಕೊಂಡಿದ್ರು ಜಯಶ್ರೀ-ಸ್ಟಿವ್. ಶೀಘ್ರದಲ್ಲೇ ಮದುವೆ ಆಗುತ್ತೇವೆ ಅಂತ ಕೂಡ ಅನೌನ್ಸ್ ಮಾಡಿದ್ದರು.


ಈಗ ಈ ಜೋಡಿ ಬ್ರೇಕಪ್ ಆಗಿರೋ ಸುದ್ದಿ ಎಲ್ಲೇಡೆ ಹರಿದಾಡ್ತಿದೆ. ಇನ್ನೂ ಇದಕ್ಕೆ ಸಾಕ್ಷಿ ಎಂಬಂತೆ ಜಯಶ್ರೀ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟೇಯಲ್ಲ, ಜೊತೆಗಿರುವ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಅಧಿಕೃತವಾಗಿ ಜಯಶ್ರೀ ಅಥವಾ ಸ್ಟಿವ್ ಈ ಬಗ್ಗೆ ಹೇಳಿಕೊಂಡಿಲ್ಲ. ಆದ್ರೇ ಜಯಶ್ರೀ ಅವರು ಮನನೊಂದು ಹಾಕುತ್ತಿರೋ ಪೋಸ್ಟ್ಗಳಿಗೆ ಕಮೆಂಟ್ಗಳ ಮೂಲಕ ಫ್ಯಾನ್ಸ್ ಸಮಾಧಾನ ಮಾಡುತ್ತಿರೋದಂತು ಸತ್ಯ.

Share This Article
Leave a comment