ಸ್ಯಾಂಡಲ್‌ವುಡ್‌ನ ರಕ್ಷಿತ್ ಶೆಟ್ರ ಆ್ಯಕ್ಟಿಂಗ್ ಸ್ಕಿಲ್ ಬೇರೆ ಇದೆ. ನಟನೆ ಮಾಡ್ತಾರೆ ಅನಿಸೋದೇ ಇಲ್ಲ. ಸಹಜವಾಗಿಯೇ ಮುಗ್ಧತೆ ಕೂಡ ಇದೆ. ಎಲ್ಲವೂ ಸೇರಿ ರಕ್ಷಿತ್ ಶೆಟ್ಟಿ ವಿಭಿನ್ನವಾಗಿಯೇ ಕಾಣಿಸುತ್ತಾರೆ. ರಕ್ಷಿತ್ ನಟನೆಯ ಯಾವುದೇ ಚಿತ್ರವನ್ನ ತೆಗೆದುಕೊಡ್ರೂ ಅಷ್ಟೇನೆ? ಅಲ್ಲಿ ರಕ್ಷಿತ್ ಛಾಪು ಇದ್ದೇ ಇರುತ್ತದೆ.
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ತುಂಬಾನೆ ಇಷ್ಟ ಆಗುತ್ತಾರೆ. ಇಡೀ ಸಿನಿಮಾದಲ್ಲಿ ಅಮಾಯಕರಾಗಿಯೇ ಹೃದಯ ತಟ್ಟುತ್ತಾರೆ. ರುಕ್ಮಿಣಿ ವಸಂತ್ ಲೆಕ್ಕವೇ ಬೇರೆ ಬಿಡಿ. ರುಕ್ಮಿಣಿ ಇಲ್ಲಿ ನಿಮ್ಮ ಹೆಚ್ಚು ಕಾಡುತ್ತಾರೆ. ಹಾಗಾಗಿಯೇ ಇಬ್ಬರು ಕಾಡುವ ಕಲಾವಿದರ ಈ ಚಿತ್ರ ಸೂಪರ್ ಹಿಟ್ ಕೂಡ ಆಗಿದೆ. ಹಾಗೆ ರಕ್ಷಿತ್ ಶೆಟ್ರ ಅಭಿನಯವನ್ನ ಎಲ್ಲೂ ನೋಡಿ ಇಷ್ಟಪ್ತಾರೆ. ಅದೇ ರೀತಿ ರಕ್ಷಿತ್ ಮೆಚ್ಚಿಕೊಳ್ಳುವ ನಟಿ ಮಣಿಯರು ಇಂಡಸ್ಟ್ರಿಯಲ್ಲಿ ಇದ್ದಾರೆ ಬಿಡಿ. ಹಾಗೆ ಇದೀಗ ಕರ್ನಾಟಕದ ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಈಗ ರಕ್ಷಿತ್ ಶೆಟ್ರ ಅಭಿನಯಕ್ಕೆ ಕಳೆದು ಹೋಗಿದ್ದಾರೆ.
ಕೃತಿ ಶೆಟ್ಟಿ ಕನ್ನಡ ಸಿನಿಮಾ ಏನೋ ಮಾಡಿಲ್ಲ. ಆದರೆ, ಕನ್ನಡದ ಕಲಾವಿದರ ಅಭಿನಯವನ್ನ ಗಮನಿಸುತ್ತಲೇ ಇರ್ತಾರೆ. ರಕ್ಷಿತ್ ಶೆಟ್ಟಿ ಈ ವಿಚಾರದಲ್ಲಿ ಫಸ್ಟ್ ಪ್ಲೇಸ್ ಅಲ್ಲಿಯೇ ಇದ್ದಾರೆ ಅನಿಸುತ್ತದೆ. ಕೃತಿ ಶೆಟ್ಟಿ ಈಗಾಗಲೇ ಈ ವಿಚಾರವನ್ನು ಕೂಡ ಹೇಳಿಕೊಂಡಿದ್ದಾರೆ. ಅದ್ಯಾವಾಗ ಹೇಳಿಕೋಂಡಿದ್ದಾರೆ. ಎಲ್ಲಿ ಹೇಳಿಕೊಂಡಿದ್ದಾರೆ. ಈ ಮಾಹಿತಿ ಇಲ್ಲ. ಆದರೆ, ಮಾತು ವೈರಲ್ ಆಗಿದೆ.
ರಕ್ಷಿತ್ ಶೆಟ್ರ ಅಭಿನಯವನ್ನ ತುಂಬಾನೆ ಚೆನ್ನಾಗಿರುತ್ತದೆ. ಅದನ್ನ ನಾವು ಗಮನಿಸುತ್ತಲೇ ಇರುತ್ತೇನೆ. ರಕ್ಷಿತ್ ಶೆಟ್ರ ಅಭಿನಯ ನನಗೆ ತುಂಬಾನೇ ಇಷ್ಟ ಅಂತಲೂ ಕೃತಿ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಒಂದು ಮಾತು ಎಲ್ಲೆಡೆ ವೈರಲ್ ಆಗಿದೆ. ಒಂದು ಕಡೆಗೆ ರಕ್ಷಿತ್ ಶೆಟ್ಟಿ ಫೋಟೋ ಮತ್ತೊಂದು ಕಡೆಗೆ ಕೃತಿ ಶೆಟ್ಟಿ ಫೋಟೋಗಳು ಈಗ ಗಮನ ಸೆಳೆಯುತ್ತಿವೆ.
ರಕ್ಷಿತ್ ಶೆಟ್ಟಿ ಸಿನಿಮಾ ಜೀವನದಲ್ಲಿ ದೊಡ್ಡ ಸಿನಿಮಾಗಳು ಬಂದಿವೆ. ಹೊಸ ರೀತಿಯ ಚಿತ್ರಗಳು ಸಾಲು ಸಾಲಾಗಿಯೇ ರೆಡಿ ಆಗುತ್ತಿವೆ. ನಿರ್ಮಾಣದಲ್ಲಿ ಒಳ್ಳೆ ಕಥೆಗೆ ರಕ್ಷಿತ್ ದುಡ್ಡು ಕೂಡ ಹಾಕಿದ್ದಾರೆ. ಅದರ ಮಧ್ಯೆ ಕೃತಿ ಶೆಟ್ಟಿ ನನಗೆ ರಕ್ಷಿತ್ ಶೆಟ್ಟಿ ಆ್ಯಕ್ಟಿಂಗ್ ಇಷ್ಟ ಅಂತ ಹೇಳಿರೋದು ಹೆಚ್ಚು ವೈರಲ್ ಆಗುತ್ತಿದೆ. ರಕ್ಷಿತ್ ಶೆಟ್ಟಿ ಮತ್ತು ಕೃತಿ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ? ಈ ರೀತಿಯ ಸುದ್ದಿ ಏನೂ ಇಲ್ಲ. ಆದರೆ, ಕೃತಿ ಶೆಟ್ಟಿ ಅಂತು ರಕ್ಷಿತ್ ಶೆಟ್ರ ಸ್ಟೈಲ್ ಆಫ್ ವರ್ಕಿಂಗ್ ಮೆಚ್ಚಿಕೊಂಡು ಕೊಂಡಾಡಿದ್ದಾರೆ. ಇನ್ನುಳಿದಂತೆ ಶೆಟ್ರ ಮೇಲೆ ಕೃತಿ ಶೆಟ್ಟಿಗೆ ಕ್ರಶ್ ಆಯಿತೇ ಅನ್ನುವ ಪ್ರಶ್ನೆ ಕೂಡ ಹೆಚ್ಚು ಕುತೂಹಲ ಮೂಡಿಸುತ್ತಿದೆ ಅಂತಲೇ ಹೇಳಬಹುದು.