ಮೈಸೂರು ಸ್ಯಾಂಡಲ್ ಸೋಪ್ ರಾಯಭಾರತ್ವಕ್ಕೇ ಹಿರೋಯಿನ್ನೇ ಬೇಕೆ, ಲಿಂಗಬೇಧ ಯಾಕೆ?: BJP ಸಂಸದ ಯದುವೀರ್ | PUBLIC NEWS 24X7
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರತ್ವಕ್ಕೆ ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ನಮ್ಮ ವಿರೋಧ ಇದೆ. ಸೋಪು ಎಂದ ಕೂಡಲೇ ಹಿರೋಯಿನ್ನೇ ಯಾಕೆ ಬೇಕು. ಸೋಪಿಗೆ ಲಿಂಗಬೇಧ ಇರುತ್ತದಾ ಎಂದು ಕರ್ನಾಟಕ ಸರ್ಕಾರವನ್ನು ಸಂಸದ ಯದುವೀರ್ ಪ್ರಶ್ನಿಸಿದ್ದಾರೆ. ಸರ್ಕಾರ ಒಳ್ಳೆಯ ಉದ್ದೇಶಕ್ಕೆ ನಿರ್ಧಾರ ಕೈಗೊಂಡಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮನ್ನಣೆ ಗಳಿಸಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ

ಮೈಸೂರು: ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಆಯ್ಕೆ ಮಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯೂ ಹೋರಾಟ ಮಾಡುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದೆ. ಇದೀಗ ಬಿಜೆಪಿ ನಾಯಕರು ಸಹ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಬಗ್ಗೆ ಕಿಡಿಕಾರಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರತ್ವಕ್ಕೆ ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ನಮ್ಮ ವಿರೋಧ ಇದೆ.
ಮೈಸೂರು ಸ್ಯಾಂಡಲ್ ಕನ್ನಡಿಗರೇ ಕಟ್ಟಿ ಬೆಳೆಸಿದ ಸಂಸ್ಥೆ. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಕನ್ನಡಿಗರನ್ನು ರಾಯಭಾರಿ ಮಾಡಬೇಕು. ಸೋಪು ಎಂದ ಕೂಡಲೇ ಹಿರೋಯಿನ್ನೇ ಯಾಕೆ ಬೇಕು.
ಸೋಪಿಗೆ ಲಿಂಗಬೇಧ ಇರುತ್ತದಾ. ಕ್ರಿಕೆಟ್ ಆಟಗಾರರು, ಒಳ್ಳೆಯ ನಾಯಕ ನಟರು ರಾಯಭಾರಿ ಆಗಬಹುದಿತ್ತಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕನ್ನಡಿಗರನ್ನೇ ರಾಯಭಾರಿ ಮಾಡಿ
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರತ್ವಕ್ಕೆ ನಟಿ ತಮನ್ನಾ ಭಾಟಿಯಾ ನೇಮಕ, ಒಂದು ಅರ್ಥದಲ್ಲಿ ಕನ್ನಡಿಗರಿಗೆ ಮಾಡಿದ ಅವಮಾನ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡಿಗರು ಬಹಳಷ್ಟು ಜನ ಇದ್ದಾರೆ.
ಅವರ್ಯಾರು ಸರ್ಕಾರದ ಕಣ್ಣಿಗೆ ಕಾಣಿಸಲಿಲ್ವ. ಅವರದ್ದೇ ಪಕ್ಷದ ನಟಿ ರಮ್ಯಾ ಅವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಕನ್ನಡಿಗರನ್ನೇ ರಾಯಭಾರಿ ಮಾಡಿದ್ದರೇ ಬ್ರಾಂಡಿನ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು ಎಂದು ಹೇಳಿದ್ದಾರೆ.
ನನಗೆ ವೈಯುಕ್ತಿಕವಾಗಿ ರಾಯಭಾರಿಯಾಗುವ ಆಸೆ ಇಲ್ಲ. ರಾಜಮನೆತನ ಕಮರ್ಷಿಯಲ್ ಆಗಿ ಸೇವೆ ಮಾಡುವುದಿಲ್ಲ.
ನಾವು ಸದಾಕಾಲ ಕನ್ನಡದ ಬ್ರಾಂಡ್ ಗಳ ಪರವಾಗಿಯೇ ಇರುತ್ತೇವೆ. ಹೀಗಾಗಿ ನನ್ನ ಹೆಸರು ಸಾಮಾಜಿಕ ಜಾಲಾತಾಣದಲ್ಲಿ ಬರುತ್ತಿದ್ದರೂ ಅದಕ್ಕೆ ನನ್ನ ಸಹಮತ ಇಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಲ್ಲಿ ಹೇಳಿದರು.