ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿ ವಿಚಾರಣೆ; ಈಗ ಎ1 ಸಿದ್ದರಾಮಯ್ಯ ಸರದಿ – ಸದ್ಯದಲ್ಲೇ ಸಿಎಂಗೂ ನೋಟಿಸ್ ಸಾಧ್ಯತೆ

public wpadmin

ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ನೋಟಿಸ್ ನೀಡುವ ಸಾಧ್ಯತೆ ಇದೆ.
ಇ.ಡಿ ಮತ್ತು ಲೋಕಾಯುಕ್ತ ತನಿಖೆ ಚುರುಕುಗೊಳಿಸಿದ್ದು, ಮುಡಾ ಕೇಸ್‌ನಲ್ಲಿ ಈಗಾಗಲೇ ಎ2, 23 ಮತ್ತು ಎ4 ವಿಚಾರಣೆ ನಡೆಸಲಾಗಿದೆ. ಈಗ ಬಾಕಿ ಇರುವುದು ಎ1 ಆರೋಪಿ ವಿಚಾರಣೆ ಮಾತ್ರ. 

ಸಿಎಂಗೆ ನೋಟಿಸ್ ನೀಡಲು ಲೋಕಾಯುಕ್ತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಪಾರ್ವತಮ್ಮ ವಿಚಾರಣೆಯ ಟಿಪ್ಪಣಿ ಬರೆಯುತ್ತಿದ್ದಾರೆ. ಟಿಪ್ಪಣಿ ಕಾರ್ಯ ಮುಗಿದ ಮೇಲೆ ಸಿಎಂಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಮುಡಾ ಹಗರಣ ಆರೋಪ ಸಂಬಂಧ ಲೋಕಾಯುಕ್ತ ದಾಖಲಿಸಿರುವ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. 

Share This Article
Leave a comment