ಮಡಿಕೇರಿ: ಮುಡಾದಲ್ಲಿ ಬರೋಬ್ಬರಿ 5,000 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಅರಕಲಗೂಡು ಶಾಸಕ ಎ ಮಂಜು ಹೊಸ ಬಂಬ್ ಸಿಡಿಸಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಸರಿಯಾಗಿ ತನಿಖೆಯಾಗಿ ಎಲ್ಲವೂ ಹೊರಬರಬೇಕು ಆಗಮಾತ್ರ ನ್ಯಾಯ ಸಿಗಲು ಸಾಧ್ಯ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಬಳಿಕ ಎಫ್ಐಆರ್ ಆಯ್ತು, ಎಫ್ಐಆರ್ ಆದ ಮೇಲೆ ರಾಜೀನಾಮೆ ಕೊಡಬೇಕು ಅಲ್ವಾ? ನಾವು 14 ಸೈಟುಗಳನ್ನು ವಾಪಸ್ ಕೊಡಿ ಎಂದಿರಲಿಲ್ಲ. ಕಳ್ಳನ ಮನಸ್ಸು ಉಳ್ಳುಉಳ್ಳುಗೆ ಅಂದಹಾಗೆ. ಇವರು ಸೈಟು ವಾಪಸ್ ಕೊಟ್ಟಿದ್ದಾರೆ. ಅಂದರೆ ತಪ್ಪು ಮಾಡಿರುವುದು ಸಾಬೀತಾದಂತೆ ಅಲ್ಲವೇ? ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕೂಡ ಅಪರಾಧವಾಗಿದೆ ಅಂತ ಸಾಬೀತಾದಂತೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.