ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಮನಷ್ಯನ ಜೀವನದ ಹಂತಗಳು. ಸಾಮಾನ್ಯವಾಗಿ ವಯಸ್ಸಿನ ಪರಿಣಾಮವು ಮುಖ ಮತ್ತು ಚರ್ಮದ ಮೇಲೆ ಕಂಡುಬರುತ್ತದೆ. ಕೆಲವರ ವಯಸ್ಸನ್ನು ಅವರ ದೇಹದಲ್ಲಿನ ಬದಲಾವಣೆಗಳ ಆಧಾರದ ಮೇಲೆ ಅಂದಾಜು ಮಾಡಬಹುದು. ಆದರೆ ಎಲ್ಲಾ ಸಂದರ್ಭಗಳಲ್ಲಿ ಇದು ಸಾಧ್ಯವಾಗದಿರಬಹುದು.
ಮಹಿಳೆಯರಿಗೆ ವಿಚಾರ ಬಂತು ಅಂದರೆ, ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ತಮ್ಮ ದೇಹ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಯಾವುದೇ ಮಹಿಳೆ ಯಾವುದೇ ವಯಸ್ಸಿನಲ್ಲಿಯೂ ತಾನು ಸುಂದರವಾಗಿ ಇರಬೇಕು ಎಂದು ಬಯಸುತ್ತಾಳೆ. ಕೆಲವು ವರದಿಗಳ ಪ್ರಕಾರ ಹೆಣ್ಣು ಮಕ್ಕಳ ಸೌಂದರ್ಯಕ್ಕೆ ವಯಸ್ಸು ಮುಖ್ಯವಲ್ಲ ಎನ್ನಲಾಗುತ್ತೆ. ಆದರೆ ಕೆಲವೊಂದು ವರದಿಗಳ ಪ್ರಕಾರ ಹೆಣ್ಣು ಮಕ್ಕಳು ಯೌವ್ವನದಲ್ಲಿ ಹೆಚ್ಚು ಸುಮದರವಾಗಿ ಇರುತ್ತಾರೆ ಎನ್ನಲಾಗಿದೆ.
2010 ರ OKCupid ಅಧ್ಯಯನದ ಪ್ರಕಾರ, ಮಹಿಳೆಯರ ಸೌಂದರ್ಯವು 21 ನೇ ವಯಸ್ಸಿನಲ್ಲಿ ಹೆಚ್ಚು ಇರುತ್ತೆ ಅಂತೆ. ಆದರೆ ಸರಾಸರಿ 20-25 ವರ್ಷ ವಯಸ್ಸಿನ ಮಹಿಳೆಯರು ಅತ್ಯಂತ ಸುಂದರವಾಗಿರುತ್ತಾರೆ ಎಂದು ಇನ್ನೊಂದು ವರದಿ ಹೆಳುತ್ತೆ.
ಆದರೆ ಕೆಲವು ಮಹಿಳೆಯರು ತಮ್ಮ 30 ಅಥವಾ 40 ರ ವಯಸ್ಸಿನಲ್ಲಿ ಹೆಚ್ಚು ಆಕರ್ಷಿಸುವಂತೆ ಇರುತ್ತಾರಂತೆ. ಅದರಲ್ಲೂ ಯೌವನದಲ್ಲಿ ಮಕ್ಕಳಂತೆ ಕಾಣುವ ಮಹಿಳೆಯರು ವೃದ್ಧಾಪ್ಯದಲ್ಲಿ ಕಿರಿಯರಾಗಿ ಕಾಣುತ್ತಾರೆ ಎನ್ನುತ್ತವೆ ಅನೇಕ ವರದಿಗಳು.
ಮಹಿಳೆಯರು 40 ರಿಂದ 45 ವರ್ಷ ವಯಸ್ಸಿನಲ್ಲೂ ಅತ್ಯಂತ ಸುಂದರವಾಗಿರುತ್ತಾರೆ. ಈ ವಯಸ್ಸಿನಲ್ಲೂ, ಅವರು ತುಂಬಾ ಆಕರ್ಷಕರಾಗಿರುತ್ತಾರೆ ಎಂದು ಹಲವು ವರದಿಗಳು ಸೂಚಿಸಿವೆ. (ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.)
ಯುವತಿಯರಿಗಿಂತ ವಿವಾಹಿತ ಹೆಣ್ಣು ಮಕ್ಕಳು ಹೆಚ್ಚು ಖುಷಿಯಾಗಿರುತ್ತಾರೆ ಎಂದು ಇನ್ನೂ ಕೆಲವು ವರದಿಗಳು ಇವೆ. ವಿವಾಹಿತ ಹೆಣ್ಣು ಮಕ್ಕಳು ಹೆಚ್ಚು ಆಕರ್ಷಿತರಾಗಿ ಕಾಣುವುದು ಮದುವೆಯಾದ ಬಳಿಕವೇ ಎಂದೂ ವರದಿಯಾಗಿದೆ.
ಮಹಿಳೆಯರು ಸ್ವಾಭಾವಿಕ 25ರ ಆಸುಪಾಸಿನಲ್ಲಿ ಸುಂದರವಾಗಿ ಕಾಣುತ್ತಾರೆ ಎಂಬ ವರದಿಗಳೂ ಇದ್ದರೂ ತುಂಬಾ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬ ವರದಿಗಳೂ ಇವೆ. ಹೀಗಾಗಿ 40ರ ವಯಸ್ಸಿನಲ್ಲಿ ರಿಯಲ್ ಆಗಿ ಕಾಣಿಸುತ್ತಾರೆ. ರಿಯಲ್ ಬ್ಯೂಟಿ ಅದು ಎನ್ನುತ್ತೆ ವರದಿ.
ಕೆಲವು ವರದಿಗಳ ಪ್ರಕಾರ ಹೆಣ್ಣು ಮಕ್ಕಳು ಅತ್ಯಂತ ಸುಂದರವಾಗಿ ಕಾಣಲು ಉಡುಗೆಯೂ ಪ್ರಮುಖ ಕಾರಣವಂತೆ. ಹಾಕುವ ಡ್ರೆಸ್‌ನಲ್ಲಿಯೂ, ಅವರ ಆಯ್ಕೆಯಲ್ಲಿಯೂ ಅತ್ಯಂತ ಸುಂದರವಾಗಿ ಕಾಣುತ್ತಾರಂತೆ. (ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.)