ಚಿಕ್ಕೋಡಿ/ಮುಂಬೈ: ನೂತನ ಶಾಸಕನ ವಿಜಯೋತ್ಸವ ಸಂದರ್ಭದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ಮಹಾರಾಷ್ಟ್ರದ (Maharashtra) ಕೊಲ್ಲಾಪೂರ ಜಿಲ್ಲೆಯ ಮಹಗಾಂವ್ ಪಟ್ಟಣದಲ್ಲಿ ನಡೆದಿದೆ.
ಚಂದಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಶಿವಾಜಿ ಪಾಟೀಲ್ (Shivaji Patil) ಅವರಿಗೆ ಅಭಿಮಾನಿಗಳು ಆರತಿ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಆರತಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಮೂಲಕ ಗುಲಾಲವನ್ನು (ಕೆಂಪು ಬಣ್ಣದ ಪುಡಿ) ಆರತಿ ಮೇಲೆ ಸುರಿಯಲಾಗಿದೆ. ಈ ವೇಳೆ ಏಕಾಏಕಿ ಭಾರೀ ಪ್ರಮಾಣದ ಬೆಂಕಿ ಹೊತ್ತಿದೆ. ಅವಘಡದಲ್ಲಿ ನೂತನ ಶಾಸಕ ಸೇರಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಂಕಿ ಹೊತ್ತಿಕೊಳ್ಳುತ್ತಲೇ ಜನ ಅಲ್ಲಿಂದ ಓಡಿದ್ದಾರೆ. ಅಲ್ಲದೇ ಬೆಂಕಿ ಸಹ ಕೂಡಲೇ ನಿಯಂತ್ರಣಕ್ಕೆ ಬಂದಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ.