ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ದುಬೈನಲ್ಲಿ ಅರೆಸ್ಟ್‌

public wpadmin

‌ನವದೆಹಲಿ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದ (Mahadev App Betting Scam) ಮಾಸ್ಟರ್ ಮೈಂಡ್ ಸೌರಭ್ ಚಂದ್ರಕರ್‌ನನ್ನು ದುಬೈನಲ್ಲಿ (Dubai) ಬಂಧಿಸಲಾಗಿದೆ. ಇಡಿ (ED) ಮನವಿಯ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್ ಬಳಿಕ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಕಿಂಗ್‌ಪಿನ್‌ನ್ನು ಬಂಧಿಸಲಾಗಿದೆ.

ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಈ ಹಗರಣವು ಸಾರ್ವಜನಿಕರಿಗೆ 5,000 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಭಾರತದಾದ್ಯಂತ ಪ್ಯಾನಲ್ ಆಪರೇಟರ್‌ಗಳ ಜಾಲದ ಮೂಲಕ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದ್ದು, ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳ ಹಣ ವರ್ಗಾವಣೆಯನ್ನು ಇದು ಸುಗಮಗೊಳಿಸುತ್ತದೆ. ಈ ಆ್ಯಪ್ ಕಂಪನಿಗೂ ಚಂದ್ರಕರ್‌ಗೂ ಸಂಪರ್ಕ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಚಂದ್ರಕರ್ ಬಂಧನವು ನಡೆಯುತ್ತಿರುವ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಅಧಿಕಾರಿಗಳು ಆತನನ್ನು ಭಾರತಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದ್ದು, ಒಂದು ವಾರದೊಳಗೆ ಭಾರತಕ್ಕೆ ಕರೆತರುವ ನಿರೀಕ್ಷೆ ಇದೆ. ಬಂಧನದ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a comment