ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಅವರು ಮರು ಮದುವೆಯಾಗಿದ್ದಾರೆ. ಪತಿ ಡೇನಿಯಲ್ ಜೊತೆಗೆ ಸನ್ನಿ ಮತ್ತೊಮ್ಮೆ ಮದುವೆಯಾಗಿದ್ದಾರೆ. ಮಾಲ್ಡೀವ್ಸ್ ಕಡಲ ತೀರದಲ್ಲಿ ತೆಗೆದ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಮಾಲ್ಡೀವ್ಸ್ ಕಡಲ ತೀರದಲ್ಲಿ ಮೂವರು ಮಕ್ಕಳ ಮುಂದೆ ಪತಿ ಡೇನಿಯಲ್ ಜೊತೆ ಮರು ಮದುವೆಯಾಗಿರುವ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಪತಿಯೊಂದಿಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ.
ಅಂದಹಾಗೆ, 2011ರಲ್ಲಿ ಡೇನಿಯಲ್ ಜೊತೆ ಸನ್ನಿ ಲಿಯೋನ್ ಮದುವೆಯಾಗಿದ್ದರು. ಈ ಜೋಡಿ ಮದುವೆಯಾಗಿ 13 ವರ್ಷಗಳು ಕಳೆದಿವೆ. 2017ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು. ಆ ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಜವಳಿ ಗಂಡು ಮಕ್ಕಳಿಗೆ ಸನ್ನಿ ದಂಪತಿ ಪೋಷಕರಾದರು.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾದಲ್ಲಿ ಸನ್ನಿ ಲಿಯೋನ್ ಕೂಡ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.