‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನತ್ತ ಮುಖ ಮಾಡಿರುವ ನಿವೇದಿತಾ ಸಿನಿಮಾ ಬದಲು ಆಲ್ಬಂ ಸಾಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ.
ತೆಲುಗಿನ ‘ವಾಲು ಕಳ್ಳತಾ’ ಎಂಬ ಆಲ್ಬಂ ಸಾಂಗ್‌ನಲ್ಲಿ ಗೌರಿ ನಾಯ್ಡು ಜೊತೆ ನಿವೇದಿತಾ ನಟಿಸಿದ್ದು, ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ‘ಮನಸಾರೆ ನಿನ್ನ’ ಎಂದು ಕನ್ನಡದಲ್ಲೂ ಸಾಂಗ್ ಮಾಡಲಾಗಿದೆ. ಆದರೆ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂದು ಕಾದುನೋಡಬೇಕಿದೆ.
https://www.instagram.com/p/DBYhSdCoig8/?utm_source=ig_web_copy_link
ತೆಲುಗಿನಲ್ಲಿ ನಟ, ಬರಹಗಾರ, ಸಂಕಲನಕಾರ, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿರುವ ಗೌರಿ ನಾಯ್ಡು ಜೊತೆ ಹಾಡಿನಲ್ಲಿ ನಿವೇದಿತಾ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯ ರಿಲೀಸ್ ಮಾಡಿರುವ ಪೋಸ್ಟರ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ.