ಭಾರತದಲ್ಲಿ ನಾಗರಿಕ ಸಮಾಜದ ಕಣ್ಣಿಗೆ ವಿಚಿತ್ರ ವಿಲಕ್ಷಣ ಎನಿಸುವ ಮದುವೆ ಸಂಪ್ರದಾಯಗಳನ್ನು ಪಾಲಿಸುವ ಕೆಲ ಸಮುದಾಯಗಳಿವೆ.
ಮದುವೆ ಒಂದು ಪವಿತ್ರವಾದ ಬಂಧನ. ಮದುವೆಯದಿನದ ಆಚರಣೆ ಒಂದೊಂದು ಕಡೆ ಒಂದೊಂದು ರೀತಿಯಾಗಿರುತ್ತದೆ. ಅದೇ ರೀತಿ ಭಾರತದ ಈ ಹಳ್ಳಿಯೊಂದರಲ್ಲಿನ ಸಮುದಾಯದಲ್ಲಿ ಮದುವೆಯಾದ ಒಂದು ವಾರದವರೆಗೆ ವಧು ಬಟ್ಟೆಯನ್ನೇ ಧರಿಸುವಂತಿಲ್ಲ, ಅಲ್ಲದೇ ಈ ಸಮಯದಲ್ಲಿ ಗಂಡ ಹಾಗೂ ಹೆಂಡತಿ ಪರಸ್ಪರ ಮಾತನ್ನು ಆಡಲ್ಲ, ಅಲ್ಲದೇ ಇಬ್ಬರನ್ನು ಪ್ರತ್ಯೇಕವಾಗಿ ಪರಸ್ಪರ ದೂರ ಇಟ್ಟಿರುತ್ತಾರೆ. ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆಯಲ್ಲಿ ಇರುವ ಪಿನಿ ಎಂಬ ಗ್ರಾಮದಲ್ಲಿ ಈ ವಿಚಿತ್ರ ಸಂಪ್ರದಾಯವಿದೆ. ಮದುವೆಯ ನಂತರ ವಧು ಒಂದು ವಾರಗಳ ಕಾಲ ಇಲ್ಲಿ ಸಂಪೂರ್ಣ ಬೆತ್ತಲಾಗಿರಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಆಕೆಗೆ ಋತ್ರುಸ್ರಾವವಾದಲ್ಲಿ ಉಣ್ಣೆಯಿಂದ ಮಾಡಿದ್ದ ಬೆಲ್ಟೊಂದನ್ನು ಮಾತ್ರ ಈಕೆ ಧರಿಸಬಹುದಾಗಿದೆ.
ಸ್ತ್ರೀ ಹಾಗೂ ಪುರುಷ ಇಬ್ಬರೂ ಈ ಸಂಪ್ರದಾಯವನ್ನು ಅನುಸರಿಸಿದರೆ ಅವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.