ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ರೊಮ್ಯಾಂಟಿಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಡ್ಯುಯೆಟ್ ಹಾಡಲು ನಟಿ ರೆಡಿಯಾಗಿದ್ದಾರೆ.
ತೃಪ್ತಿ ದಿಮ್ರಿ ಅನಿಮಲ್ ಸಿನಿಮಾದಲ್ಲಿ ಮಾಡಿದ್ದು ಒಂದು ಚಿಕ್ಕ ಪಾತ್ರ ಅಷ್ಟೇ. ಆದರೆ ಆ ಪಾತ್ರದಿಂದ ಅವರಿಗೆ ಸಿಕ್ಕ ಯಶಸ್ಸು ತುಂಬ ದೊಡ್ಡದು. ಬೋಲ್ಡ್ ಆಗಿ ಕಾಣಿಸಿಕೊಂಡ ಅವರು ಸಖತ್ ಜನಪ್ರಿಯತೆ ಗಳಿಸಿದರು. ಈಗ ಅವರ ಡಿಮ್ಯಾಂಡ್ ಹೆಚ್ಚಿದೆ.
ಭಾರಿ ವೈರಲ್ ಆದ ‘ತೋಬಾ ತೋಬಾ..’ ಹಾಡಿನ ಮೂಲಕವೂ ತೃಪ್ತಿ ದಿಮ್ರಿ ಅವರು ಸೆನ್ಸೇಷನ್ ಸೃಷ್ಟಿ ಮಾಡಿದರು. ಸೋಶಿಯಲ್ ಮೀಡಿಯಾದಲ್ಲೂ ಅವರ ಚಾರ್ಮ್ ಹೆಚ್ಚಾಗಿದೆ. ಹತ್ತು ಹಲವು ಅವಕಾಶಗಳು ತೃಪ್ತಿ ದಿಮ್ರಿ ಅವರನ್ನು ಹುಡುಕಿಕೊಂಡು ಬರುತ್ತಿವೆ.
ನಟ ಕಾರ್ತಿಕ್ ಆರ್ಯನ್ ಅವರ ಹೊಸ ಸಿನಿಮಾಗೆ ತೃಪ್ತಿ ದಿಮ್ರಿ ಅವರೇ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈಗಾಗಲೇ ಅವರಿಬ್ಬರು ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ಬಹುಬೇಡಿಕೆ ನಟಿ ತೃಪ್ತಿ ದಿಮ್ರಿ
Leave a comment
Leave a comment