ಮತ್ತೆ ಬಿಗ್ ಬಾಸ್​ ಮನೆಯಲ್ಲಿ ಬಿಗ್​ ಫೈಟ್​.. ತಿವಿಕ್ರಮ್​ಗೆ ಗೋಮುಖ ವ್ಯಾಘ್ರ ಎಂದ ಮೋಕ್ಷಿತಾ!

public wpadmin

ಬಿಗ್​​ಬಾಸ್​​​ ಮನೆಯಲ್ಲಿ ಸ್ಪರ್ಧಿಗಳಿಬ್ಬರ ನಡುವೆ ಕಿಚ್ಚು ಹೊತ್ತಿಕೊಂಡಿದೆ. ನಟ ತಿವಿಕ್ರಮ್​ ಮತ್ತು ನಟಿ ಮೋಕ್ಷಿತಾ ಪೈ ನಡುವೆ ಗಲಾಟೆ ಏರ್ಪಟ್ಟಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾರವರು ತಿವಿಕ್ರಮ್​​ಗೆ ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ.

ಹೌದು. ತಿವಿಕ್ರಮ್​ ಮತ್ತು ಮೋಕ್ಷಿತಾ ಈಗ ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ಅದರಲ್ಲೂ ತಿವಿಕ್ರಮ್​ ಆಡಿದ ಮಾತುಗಳು ಮೋಕ್ಷಿತಾ ಪೈ ಕಿವಿಗೆ ಬಿದ್ದಿದ್ದು, ಇದೇ ವಿಚಾರವಾಗಿ ಜಗಳಕ್ಕಿಳಿದ್ದಾರೆ ಮೋಕ್ಷಿತಾ.

ಉಗ್ರಂ ಮಂಜು ಜೊತೆಗೆ ತಿವಿಕ್ರಮ್ ಮಾತನಾಡುತ್ತಾ,​ ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಮೋಕ್ಷಿತಾ ಕಿವಿಗೆ ಬಿದ್ದಿದ್ದು, ನಾನು 10 ವಾರ ಇರ್ತೀನಿ ಅಂತ ಡಿಸೈಡ್​ ಮಾಡೋಕೆ ಇವರು ಯಾರು? ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ತಿವಿಕ್ರಮ್​ ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದು ಹೇಳಿದ್ದಾರೆ.

ರೊಚ್ಚಿಗೆದ್ದ ಮೋಕ್ಷಿತಾ ಇಷ್ಟಕ್ಕೆ ಸುಮ್ಮನಾಗದೆ, ನಾವೆಲ್ಲಾ ಇಲ್ಲಿ ಏನು ಅಲ್ಲ. ಯಾವುದೋ ಒಂದು ಸೀರಿಯಲ್​ ಐದುವರೆ ವರ್ಷ ಮಾಡಿಕೊಂಡು ಬಂದಿದ್ದೀವಿ ಸುಮ್ನೆ. ನೀವು ಏನು ಅಲ್ಲ ತಿಳಿದುಕೊಂಡುಬಿಡಿ. ನೀವು ಗೋಮುಖ ವ್ಯಾಘ್ರ ತರಹ ಆಟ ಆಡ್ತಾ ಇದ್ದೀರಾ. ಇವತ್ತಿಂದ ಆಟ ಶುರು ಎಂದು ಹೇಳಿದ್ದಾರೆ.

ಇತ್ತ ತಿವಿಕ್ರಮ್​ ನಟಿ ಮೋಕ್ಷಿತಾ ಮಾತಿಗೆ ನೀವು ಏನು ತಿಳಿದುಕೊಂಡಿದ್ದೀರಾ ಅದನ್ನು ಸಾಭೀತು ಪಡಿಸುತ್ತೇನೆ ಎಂದು ಹೇಳಿದ್ದಾರೆ.

Share This Article
Leave a comment