ಮಗಳನ್ನು ಹಗ್ಗದಲ್ಲಿ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ತಂದೆ

public wpadmin

ಲಕ್ನೋ: ತನ್ನ 10 ವರ್ಷದ ಮಗಳನ್ನು ಹಗ್ಗದಿಂದ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ತಂದೆ ತನ್ನ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ್ದಾನೆ. ಈ ಕುರಿತು ನೆರೆಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗೋವಿಂದ್ ರೈ ರೈಕ್ವಾರ್ (45) ಬಂಧಿತ ಆರೋಪಿ.

ವಿಚಾರಣೆ ವೇಳೆ, ಮಗಳು ನಾನು ಹೇಳುವುದನ್ನು ಪಾಲಿಸುವುದಿಲ್ಲ. ನನ್ನ ಮಾತನ್ನು ಕೇಳುವುದಿಲ್ಲ. ಆ ಕಾರಣಕ್ಕೆ ನಾನು ಕೋಪಗೊಂಡು ಆಕೆಯನ್ನು ಥಳಿಸಿದ್ದೇನೆ ಎಂದು ಹೇಳಿಕೊಂಡಿರುವುದಾಗಿ ಬಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜಾ ದಿನೇಶ್ ಸಿಂಗ್ ಸೋಮವಾರ ಮಾಹಿತಿ ನೀಡಿದ್ದಾರೆ.




Share This Article
Leave a comment