ಕನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು ಸದ್ಯ ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳ ನಡುವೆ ಮಗನ ಜೊತೆ ನಟಿ ಸಮಯ ಕಳೆಯುತ್ತಿದ್ದಾರೆ. ಗುಂಡಾಗಿರುವ ಮುದ್ದಾದ ಮಗನ ಮುದ್ದಾದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..
ಜೂನ್‌ನಲ್ಲಿ ಅಮಲಾ ಗಂಡು ಮಗುವಿಗೆ ಜನ್ಮ ನೀಡಿದರು. ಮಗನ ಎಂಟ್ರಿಯಿಂದ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಮುದ್ದಾಗಿರುವ ಮಗನ ಜೊತೆಗಿನ ಲೇಟೆಸ್ಟ್ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಅಮಲಾ ಮಗನ ಲುಕ್ಸ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.