ಮಕ್ಕಳಿಗೆ ಪೋಷಕರ ಮೇಲೆ ಭಯವಿರುವ ಕಾರಣವು ಕೆಲವೊಮ್ಮೆ ತಪ್ಪನ್ನು ಮುಚ್ಚಿಡಲು ಸುಳ್ಳನ್ನು ಹೇಳಬಹುದು. ಹೀಗಾಗಿ ಮಕ್ಕಳು ತಪ್ಪು ಮಾಡಿದರೂ ಕೂಡ ಪ್ರೀತಿಯಿಂದಲೇ ಬುದ್ಧಿ ಹೇಳಿ. ಇಲ್ಲದಿದ್ದರೆ ತನ್ನ ತಪ್ಪನ್ನು ಮುಚ್ಚಿಡಲು ಸುಳ್ಳು ಹೇಳಿ ಅದನ್ನೇ ಅಭ್ಯಾಸವನ್ನಾಗಿಕೊಳ್ಳಬಹುದು. ಮಗುವಿನ ಈ ಅಭ್ಯಾಸವನ್ನು ತೊಡೆದು ಹಾಕಲು ಹಿಂದಿನ ಕಾರಣ ತಿಳಿದುಕೊಳ್ಳುವುದು ಅಗತ್ಯ.
ಸಣ್ಣ ಮಕ್ಕಳು ಕಥೆಯಲ್ಲಿ ಬರುವ ಪಾತ್ರಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಹೀಗಾಗಿ ಮಗುವಿನಲ್ಲಿ ಸುಳ್ಳು ಹೇಳುವ ಅಭ್ಯಾಸವೇನಾದರೂ ಕಂಡು ಬಂದರೆ ಮಗುವಿನ ಸ್ಫೂರ್ತಿದಾಯಕ ಕಥೆ ಹೇಳಿ ಮಗುವಿನ ಗುಣಸ್ವಭಾವವನ್ನು ಬದಲಾಯಿಸಿ. ಸುಳ್ಳು ಹೇಳಿ ಶಿಕ್ಷೆ ಅನುಭವಿಸಿರುವ, ವ್ಯಕ್ತಿಗೆ ತೊಂದರೆಯಾಗಿರುವ ಕಥೆಗಳನ್ನು ಹೇಳಿದರೆ ಮಕ್ಕಳ ಈ ಅಭ್ಯಾಸವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಮಕ್ಕಳು ಸುಳ್ಳು ಹೇಳುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ತಿದ್ದಿ ಬುದ್ಧಿ ಹೇಳಿ. ಸತ್ಯ ಹೇಳುವುದರಿಂದ ಏನೆಲ್ಲಾ ತೊಂದರೆಯಿಂದ ಪಾರಾಗಬಹುದು ಎಂದು ತಿಳಿಸುವ ಮೂಲಕ ಸಾಧ್ಯವಾದಷ್ಟು ನಿಜವನ್ನೇ ಹೇಳಲು ಪ್ರೋತ್ಸಾಹಿಸುವುದು ಒಳ್ಳೆಯದು.
ಮಕ್ಕಳು ತಪ್ಪು ಮಾಡಿ ಸತ್ಯ ಹೇಳಿದರೆ, ಅವರನ್ನು ಪ್ರಾಮಾಣಿಕರು ಎಂದು ಹೊಗಳಿದರೆ ನಿಜಕ್ಕೂ ಖುಷಿಯಾಗುತ್ತದೆ. ಯಾವಾಗಲೂ ನಿಜವನ್ನೇ ಹೇಳಬೇಕು ಎಂದೆನಿಸುತ್ತದೆ. ಮಗುವಿನ ತಪ್ಪು ಮಾಡಿದ್ದಲ್ಲಿ ಅದನ್ನು ತಿದ್ದಿಕೊಳ್ಳಲು ಏನು ಮಾಡಬೇಕು, ಆ ತಪ್ಪು ಆಗದಂತೆ ಹೇಗೆ ಜಾಗ್ರತೆ ವಹಿಸಬೇಕು ಎನ್ನುವುದು ಹೇಳಿಕೊಡುವುದು ಮುಖ್ಯ.