ಮಂಗಳೂರು ಕುತ್ತಾರಿನ ಕೊರಗಜ್ಜ ಕ್ಷೇತ್ರಕ್ಕೆ ಶಿವಣ್ಣ ದಂಪತಿ ಭೇಟಿ

public wpadmin

ಟ ಶಿವರಾಜ್‌ಕುಮಾರ್ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್‌ ಸಿಕ್ಕ ಬೆನ್ನಲ್ಲೇ ಪತ್ನಿ ಗೀತಾ ಜೊತೆ ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. 

ಮಂಗಳೂರಿನ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಶಿವಣ್ಣ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೊರಗಜ್ಜ ಕ್ಷೇತ್ರದ ಮಹಿಮೆಯ ಕುರಿತು ನಟ ಮಾತನಾಡಿ, ಕರಾವಳಿಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಆದರೆ ಇಲ್ಲಿ ಭೇಟಿ ನೀಡಿದಾಗ ಏನೋ ಒಂದು ನೆಮ್ಮದಿ ಸಿಗುತ್ತದೆ. ಕೊರಗಜ್ಜ ದೈವದ ಮೇಲೆ ನಂಬಿಕೆ ಇದೆ. ಈ ದೈವದ ಮೇಲೆ ಜನರು ಕೂಡ ಅಪಾರ ನಂಬಿಕೆ ಇಟ್ಟಿದ್ದಾರೆ. ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಇನ್ನೂ ಎಲ್ಲವೂ ಒಳ್ಳೆದಾಗುತ್ತದೆ ಎಂದಿದ್ದಾರೆ.

ಅಂದಹಾಗೆ, ಭೈರತಿ ರಣಗಲ್, 45, ಉತ್ತರಾಕಾಂಡ, ರಾಮ್ ಚರಣ್ ಜೊತೆಗಿನ ತೆಲುಗು ಸಿನಿಮಾ, ತಮಿಳು ಡೈರೆಕ್ಟರ್ ಕಾರ್ತಿಕ್ ಅದ್ವೈತ್‌ ಜೊತೆಗಿನ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಶಿವಣ್ಣ ಕೈಯಲ್ಲಿವೆ.

Share This Article
Leave a comment