ನವದೆಹಲಿ: ಭಾರತದ ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿಗೆ ಸೇರಿದ 6 ಸ್ವಿಸ್ ಬ್ಯಾಂಕ್ ಅಕೌಂಟ್ ಗಳನ್ನು ಸೀಜ್ ಮಾಡಲಾಗಿದೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಈ ಆರೋಪಕ್ಕೆ ಸೆಡ್ಡು ಹೊಡೆದಿರುವ ಅದಾನಿ ಗ್ರೂಪ್, ಇದೆಲ್ಲ ಸುಳ್ಳು ಎಂದಿದೆ.
ಅದಾನಿ ಗ್ರೂಪ್ಗೆ ಸಂಬಂಧಿಸಿದ ಸ್ವಿಸ್ ಬ್ಯಾಂಕ್ನಲ್ಲಿನ 6 ಅಕೌಂಟ್ಗಳಲ್ಲಿ 310 ಮಿಲಿಯನ್ ಡಾಲರ್ ಅಂದರೆ 26,017,353,260 ರೂಪಾಯಿ ಹಣವನ್ನು ಸದ್ಯಕ್ಕೆ ಸೀಜ್ ಮಾಡಲಾಗಿದೆ. 2021ರ ಮನಿ ಲಾಂಡರಿಂಗ್ ಹಾಗೂ ಸೆಕ್ಯುರಿಟೀಸ್ ಫೋರ್ಜರಿ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಅಕೌಂಟ್ಗಳನ್ನು ಸ್ವಿಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಇದರಿಂದ ಅದಾನಿ ಗ್ರೂಪ್ಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ ಎನ್ನಲಾಗಿದೆ.