ಬ್ಲ್ಯಾಕ್ ಔಟ್​ಫಿಟ್​ನಲ್ಲಿ ಬಾದ್​ಷಾ! ಬರ್ತ್​ಡೇ ನೈಟ್ ಕಿಚ್ಚನ ಮಸ್ತ್ ಲುಕ್

public wpadmin

ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇ ಸೆಲೆಬ್ರೇಷನ್ ಜೋರಾಗಿಯೇ ಇತ್ತು. ಮನೆ ಎದುರು ಎಂದಿನಂತೆ ಅಭಿಮಾನಿಗಳು ರಾತ್ರಿನೇ ಆಗಮಿಸಿದ್ದರು. ಅಭಿಮಾನಿಗಳ ಈ ಒಂದು ಆಗಮನಕ್ಕೆ ಗೌರವ ಕೊಟ್ಟ ಕಿಚ್ಚ ಸುದೀಪ್ ಮನೆಯಿಂದಲೂ ಹೊರ ಬಂದು ಅಭಿಮಾನಿಗಳ ಪ್ರೀತಿಯ ಶುಭಾಶಯಗಳನ್ನ ಕೂಡ ಸ್ವೀಕರಿಸಿದ್ದಾರೆ.
ಅಪಾರ ಅಭಿಮಾನಿಗಳ ಮಧ್ಯೆ ಕಿಚ್ಚ ಸುದೀಪ್ ವಿಶೇಷವಾಗಿಯೇ ಹೊಳೆಯುತ್ತಿದ್ದರು. ಕಪ್ಪು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಡ್ ಧರಿಸಿಕೊಂಡು ಎಲ್ಲರ ಗಮನ ಸೆಳೆದರು. ಕಿಚ್ಚನ ಈ ಒಂದು ಲುಕ್ ವಿಶೇಷವಾಗಿಯೇ ಗಮನ ಸೆಳೆದಿದೆ. ಹಾಗೆ ಅಭಿಮಾನಿಗಳಿಗೆ ವಿಶೇಷ ಫೀಲ್ ಕೂಡ ಕೊಟ್ಟಿದೆ.

ಸುದೀಪ್ ತಮ್ಮ ಜನ್ಮ ದಿನದ ರಾತ್ರಿ ಕೂಡ ಕಪ್ಪು ಬಣ್ಣದ ಬಟ್ಟೆ ತೊಟ್ಟಿರೋದು ವಿಶೇಷವಾಗಿಯೇ ಕಾಣಿಸುತ್ತಿದೆ. ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಯಾರೂ ಕಪ್ಪು ಬಟ್ಟೆಯನ್ನ ತೊಡೋದಿಲ್ಲ. ಆದರೆ, ಸುದೀಪ್ ಕಪ್ಪು ಬಣ್ಣದ ಬಟ್ಟೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಸುದೀಪ್ ಇದೀಗ ಸಿಕ್ಕಾಪಟ್ಟೆ ವರ್ಕೌಟ್ ಕೂಡ ಮಾಡಿದ್ದಾರೆ. ಹಾಗಾಗಿಯೇ ಒಳ್ಳೆ ಬಾಡಿ ಕೂಡ ಬಿಲ್ಡ್ ಆಗಿದೆ. ತೋಳಿಲ್ಲದ ಶರ್ಟ್ ಧರಿಸಿಕೊಂಡು ತಮ್ಮ ಬೈಸೆಪ್ಸ್‌ ಅನ್ನ ಸಹ ಸಖತ್ ಆಗಿಯೇ ತೋರಿಸಿದ್ದಾರೆ ಅನಿಸುತ್ತದೆ. ಸುದೀಪ್ ಈ ಮೊದಲು ಎಂದೂ ತೋಳಿಲ್ಲದ ಶರ್ಟ್ ಇಲ್ವೇ ಟೀ ಶರ್ಟ್ ಕೂಡ ತೊಟ್ಟಿರಲಿಲ್ಲ. ಆದರೆ, ಇದೀಗ ಸುದೀಪ್ ತೋಳಿಲ್ಲದ ಶರ್ಟ್ ತೊಟ್ಟು ಹೊಳೆಯುತ್ತಿದ್ದಾರೆ.

ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಮ್ಯಾಕ್ಸ್ ಚಿತ್ರದ ಸಾಂಗ್ ರಿಲೀಸ್ ಆಗಿದೆ. Maximum Mass ಅನ್ನೋ ಈ ಗೀತೆ ಸೂಪರ್ ಆಗಿಯೇ ಇದೆ. ಸುದೀಪ್ ಜನ್ಮ ದಿನಕ್ಕೆ ಹೇಳಿ ಮಾಡಿಸಿರೋ ಹಾಡಿನ ರೀತಿನೇ ಇದೆ. ಇದನ್ನ ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡುತ್ತಿದ್ದಾರೆ. ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಬಳಿಕ ಮುಂದಿನ ಚಿತ್ರ ಯಾವುದು ಅನ್ನೋ ಪ್ರಶ್ನೆ ಕೂಡ ಇದೆ. ಆದರೆ, ಈಗಾಗಲೇ ಈ ಮುಂದಿನ ಸಿನಿಮಾದ ಮಾಹಿತಿ ಕೂಡ ಹೊರೆಗೆ ಬಂದಿದೆ. ಅದು ಕೂಡ ಸುದೀಪ್ ಜನ್ಮದಿನದಂದು ರಿವೀಲ್ ಆಗುತ್ತಿದೆ. ಬೆಳಗ್ಗೆ 10 ಗಂಟೆ ಹೊತ್ತಿಗೆ ಚಿತ್ರದ ಅಧಿಕೃತ ಮಾಹಿತಿ ದೊರೆಯುತ್ತಿದೆ. ಸುದೀಪ್ ಮತ್ತು ನಿರೂಪ ಭಂಡಾರಿ ಜೋಡಿ ಈ ಚಿತ್ರಕ್ಕೆ ಹೆಸರು ಏನು ಅನ್ನುವ ಕುತೂಹಲ ಇದೆ. ಆದರೆ, ಈ ಚಿತ್ರಕ್ಕೆ ಬಿಲ್ಲಾ ರಂಗಾ ಬಾಷಾ ಅನ್ನೋ ಟೈಟಲ್ ಇದೆ. ಆದರೆ, ಇದೇ ಟೈಟಲ್ ಇರುತ್ತಾ.? ಗೊತ್ತಿಲ್ಲ. ಆದರೆ, ಸುದೀಪ್ ಜೊತೆಗಿನ ನಿರೂಪ್ ಭಂಡಾರಿ ಪ್ರೊಜೆಕ್ಟ್ ಈ ದಿನವೇ ಅನೌನ್ಸ್ ಆಗುತ್ತಿದೆ.

ಸುದೀಪ್ ಮತ್ತು ನಿರೂಪ್ ಭಂಡಾರಿ ಈ ಹಿಂದೆ ವಿಕ್ರಾಂತ್ ರೋಣ ಚಿತ್ರ ಮಾಡಿದ್ದರು. ಈ ಚಿತ್ರ ಮಕ್ಕಳಾದಿಯಾಗಿ ಎಲ್ಲರಿಗೂ ಇಷ್ಟ ಆಗಿತ್ತು. ಹಾಗೆ ಈಗ ಇದೇ ಜೋಡಿ ಮತ್ತೊಂದು ಚಿತ್ರ ಮಾಡೋಕೆ ಮುಂದಾಗಿದೆ. ಇದು ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತದೆ. ವಿಕ್ರಾಂತ್ ರೋಣ ಚಿತ್ರದ ಮೊದಲೇ ಈ ಒಂದು ಪ್ರೊಜೆಕ್ಟ್ ಪ್ಲಾನ್ ಆಗಿದೆ. ಹೆಚ್ಚು ಕಡಿಮೆ ಸುಮಾರು 6 ವರ್ಷಗಳಿಂದಲೇ ಡೈರೆಕ್ಟರ್ ಅನೂಪ್ ಭಂಡಾರಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಅದು ಈಗ ಅನೌನ್ಸ್ ಆಗುತ್ತಿದೆ. ಅತಿ ದೊಡ್ಡಮಟ್ಟದಲ್ಲಿಯೇ ಈ ಒಂದು ಸಿನಿಮಾ ಇರುತ್ತದೆ ಅಂತಲೆ ಹೇಳಬಹುದು.

Share This Article
Leave a comment