ಬ್ಯಾಗ್‌ ಇಟ್ಟು ಕೆಲಸಕ್ಕೆ ತೆರಳಿ – ಮೆಟ್ರೋ ನಿಲ್ದಾಣದಲ್ಲಿ ಬಂದಿದೆ ಡಿಜಿಟಲ್ ಲಗೇಜ್ ಲಾಕರ್

public wpadmin

ಬೆಂಗಳೂರು: ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್.‌ ಪ್ರಯಾಣಿಕರಿಗಾಗಿ ಸ್ಮಾರ್ಟ್ ಡಿಜಿಟಲ್ ಲಗೇಜ್‌ ಲಾಕರ್ (Smart Digital Luggage Locker) ಸೌಲಭ್ಯವನ್ನು ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ (BMRCL) ಕಲ್ಪಿಸಿದೆ.

ಮೆಜೆಸ್ಟಿಕ್ ಸೇರಿದಂತೆ ಇತರೇ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಈ ಲಾಕರ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಪ್ರಯಾಣಿಕರು ತಾತ್ಕಾಲಿಕವಾಗಿ ಈ ಲಾಕರ್‌ ಬಳಸಿ ಬ್ಯಾಗ್‌, ವಸ್ತುಗಳನ್ನು ಇಡಬಹುದು.

ಪ್ರಯಾಣಿಕರ ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಕಾಯ್ದಿರಿಸಲು (ಮಧ್ಯಮಗಾತ್ರ) 70 ರೂ. ದರವನ್ನು ನಿಗದಿ ಮಾಡಿದರೆ ದೊಡ್ಡ ಗಾತ್ರದ ಬ್ಯಾಗ್‌ಗಳನ್ನು 6 ಗಂಟೆ ಕಾಯ್ದಿರಿಸಲು 100 ರೂ. ದರವನ್ನು ನಿಗದಿ ಮಾಡಲಾಗಿದೆ. ಈಗಾಗಲೇ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.

ಯಾರಿಗೆಲ್ಲಾ ಅನುಕೂಲ?
– ಒಂದೆರೆಡು ಗಂಟೆಗಳ ಕಾಲ ಕೆಲಸವಿದ್ದಲ್ಲಿ ಅವರು ಇಲ್ಲಿ ಲಗೇಜ್‌ ಇಡಬಹುದು.
– ಊರಿನಿಂದ ಬಂದವರು ಮನೆಗೆ ಹೋಗಲು ಸಮಯವಿಲ್ಲದೇ ಕಚೇರಿ ಕೆಲಸಕ್ಕೆ ಹೋಗುವವರು ತಮ್ಮ ಲಗೇಜುಗಳನ್ನು ಇಲ್ಲಿಇರಿಸಬಹುದು.
– ಸಿನಿಮಾ, ಪಾರ್ಟಿ, ಶಾಂಪಿಂಗ್‌ ತೆರಳುವವರು ಕಚೇರಿಯ ಬ್ಯಾಗ್‌ಗಳನ್ನು ಇಡಬಹುದು.
– ಮಹಿಳೆಯರು, ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ತಮ್ಮ ಲಗೇಜುಗಳನ್ನು ಹೊತ್ತುಕೊಂಡು ಹೋಗಲಾಗದ ಸಂದರ್ಭದಲ್ಲಿ ತಮ್ಮ ಬ್ಯಾಗ್‌ಗಳನ್ನು ಈ ಲಾಕರ್‌ನಲ್ಲಿ ಇಟ್ಟು ತೆರಳಬಹುದು.

Share This Article
Leave a comment