ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

public wpadmin

ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿರುವ ಕುಂದಾನಗರಿಯ ರೈತರಿಗೆ ವಕ್ಫ್ ಬೋರ್ಡ್ ಶಾಕ್ ಕೊಟ್ಟಿದ್ದು, 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ವಕ್ಫ್ ಬೋರ್ಡ್ ಹೊಡೆತಕ್ಕೆ ದಂಗಾದ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಪಹಣಿ ಪತ್ರದಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದೆ.

ರಾಕೇಶ ಕೋಳಿಗೆ ಸೇರಿದ 1 ಎಕರೆ 5 ಗುಂಟೆ ಜಮೀನು, ಮಹಾವೀರ ಬಡಿಗೇರ ಕುಟುಂಬಕ್ಕೆ ಸೇರಿದ 2 ಎಕರೆ, ಸುನೀಲ ಮುಜಾವರಗೆ ಸೇರಿದ 1 ಎಕರೆ 31 ಗುಂಟೆ ಜಮೀನು, ಸುಮಿತ್ರಾ ಮುಜಾವರ್‌ಗೆ ಸೇರಿದ 1.36 ಎಕರೆ, ಸುಭಾಷ ಭೀಮರಾಯಿಗೆ ಸೇರಿದ 5 ಗುಂಟೆ, ಬಾಬು ಮಾಲಗಾರಗೆ 30 ಗುಂಟೆ,ಬಾಬು ಮುಜಾವರ್‌ಗೆ ಸೇರಿದ 2 ಎಕರೆ, ದ್ವಾರಪಾಲ್ ಗೌರಾಜ್ 2.2 ಎಕರೆ ಸಾತಪ್ಪ ಮಾಳಿಗೆ ಸೇರಿದ 2.15 ಎಕರೆ, ರಾಜು ಮುಜಾವರಗೆ ಸೇರಿದ 2.10 ಎಕರೆ ಜಮೀನಿಗೆ ವಕ್ಫ್ ಬೋರ್ಡ್ ಕನ್ನಹಾಕಿದೆ.

ಹಲವು ವರ್ಷಗಳಿಂದ ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ರೈತರು ಜೀವನ ಸಾಗಿಸುತ್ತಿದ್ದರು. ಆದರೆ ವಕ್ಫ್ ಬೋರ್ಡ್ ವಕ್ರದೃಷ್ಠಿಗೆ ಬೆಳಗಾವಿ ಜಿಲ್ಲೆಯ ರೈತರು ದಂಗಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ವಕ್ಫ್ ಎಂದು ನಮೂಸಿದಲಾಗಿರುವ ಹೆಸರನ್ನು ವಾಪಸ್ ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a comment