ನವದೆಹಲಿ: ಬಾಬುಸಾಬ್‌ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟಂಬಕ್ಕೆ ಪರಿಹಾರ ಘೋಷಣೆಯಾಗಿದೆ.
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆದಿದೆ.
ಹೆಣ್ಣೂರು ಪೊಲೀಸರು ಕಟ್ಟಡ ಕುಸಿತ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಮುನಿರೆಡ್ಡಿ, ಕಾಂಟ್ರ್ಯಾಕ್ಟರ್ ಹಾಗೂ ಭುವನ್ ರೆಡ್ಡಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಸತತ 34 ಗಂಟೆ ಕಾರ್ಯಚರಣೆ ಮಾಡಿ ಎನ್‌ಡಿಎಫ್ ತಂಡ ಕಾರ್ಯಚರಣೆ ಸ್ಥಗಿತಗೊಳಿಸಿತ್ತು. ಸದ್ಯ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಕಾರ್ಯಚರಣೆ ಮತ್ತೆ ಆರಂಭವಾಗಿದೆ.
ಬೆಂಗಳೂರು ಕಟ್ಟಡ ಕುಸಿತ- ಪಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
Leave a comment
Leave a comment