ಬೆಂಗಳೂರು: ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದೆ. ವಿಜಯಪುರದಿಂದ ಆರಂಭವಾದ ವಿವಾದ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಇದೀಗ ಬೆಂಗಳೂರಿಗೂ ಎಂಟ್ರಿ ಕೊಟ್ಟಿರುವ ಈ ವಕ್ಫ್ ಭೂತ ನಗರದ ಐತಿಹಾಸಿಕ ಉದ್ಯಾನವನದ ಮೇಲೂ ವಕ್ರದೃಷ್ಟಿ ನೆಟ್ಟಿದೆ ಎನಿಸುತ್ತಿದೆ…
ಹೌದು ಬೆಂಗಳೂರಿನಲ್ಲಿ ಸುಪ್ರಸಿದ್ಧಿ ತಾಣವೆನಿಸಿರುವ ಐತಿಹಾಸಿಕ ಲಾಲ್‌ಬಾಗ್ ಪಾರ್ಕ್ ಸುತ್ತಲಿನ ಪ್ರದೇಶಗಳನ್ನು ತನ್ನದು ಎಂದು ವಕ್ಫ್ ಹೇಳುತ್ತಿದೆ. ಈ ಪಾರ್ಕ್ ಮೇಲೂ ಇದೀಗ ವಕ್ಫ್ ಬೋರ್ಡ್‌ನ ಕರಿನೆರಳು ಬಿದ್ದಂತೆ ತೋರುತ್ತಿದೆ.
ವಕ್ಫ್ ಪಾಲಾಗುತ್ತಾ ಲಾಲ್‌ಬಾಗ್!?
ಬೆಂಗಳೂರು ಎಂದೊಡನೆ ಎಲ್ಲರಿಗೂ ಲಾಲ್‌ಬಾಗ್ ನೆನಪಾಗುತ್ತದೆ. ಇಂತಹ ಸುಂದರವಾದ ಉದ್ಯಾನವನವನ್ನು ಈಗಾಗಲೇ ಖಾಸಗಿಯವರ ಒತ್ತುವರಿ ಮಾಡಿಕೊಂಡು ಹರಿದು ಹಂಚಿ ಹೋಗಿದೆ. ಇದೀಗ ವಕ್ಫ್ ಹೆಸರಿನಲ್ಲಿ ಖಾಸಗಿ ಪಾಲಾಗುತ್ತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಲಾಲ್ ಬಾಗ್ ಸುತ್ತಮುತ್ತಲಿನ ಜಾಗಗಳನ್ನು ತನ್ನದು ಅಂತ ವಕ್ಫ್ ದಾವೆ ಹೂಡಿದೆ. ಲಾಲ್ ಬಾಗ್ ಗೆ ಹೊಂದಿಕೊಂಡಿರುವ ಹಾಪ್ ಕಾಮ್ಸ್ ಭೂಮಿ ತನ್ನದು ಎಂದು ಹೇಳಿಕೊಂಡಿದೆ. ಈಗಾಗಲೇ ಸಿಟಿ ಸರ್ವೇ ನಂಬರ್ 18 ರ ಮೇಲೆ ಖಾಸಗಿ ಹಾಗೂ ವಕ್ಫ್ ನಡುವೆ ದಾವೆ ನಡೆಯುತ್ತಿದೆ.
2016ರಿಂದ 5 ಎಕರೆ ಭೂಮಿಗಾಗಿ ವಿವಾದ ನಡೆಯುತ್ತಿದೆ. ಈ ನಡುವೆ ಲಾಲ್ ಬಾಗ್ ಸಸ್ಯೋಧ್ಯಾನವನದ ಒಂದು ಭಾಗವೇ ವಕ್ಫ್ ಆಸ್ತಿ ಅಂತಿದೆ. ಸರ್ವೇ ನಂಬರ್ 14,16,17,18 19,20 ಮೇಲೆ ವಕ್ಫ್ ಕಣ್ಣು ಇಟ್ಟಿದೆ ಎಂದು ಹೇಳಲಾಗುತ್ತಿದ್ದು.. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.