ಬಿಗ್​ಬಾಸ್ ಬ್ಯೂಟಿಗೆ ಕೂಡಿ ಬಂತಾ ಕಂಕಣ ಭಾಗ್ಯ? ರೇಷ್ಮೆ ಸೀರೆ ಉಟ್ಟು ವಧುನಿಂತೆ ಕಂಗೊಳಿಸಿದ ನಮ್ರತಾ!

public wpadmin

ಬಿಗ್‌ ಬಾಸ್‌ ಖ್ಯಾತಿಯ ನಮ್ರತಾ ಗೌಡ ಅವರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಜತೆಗೆ ಸೀರೆಯಲ್ಲಿ ಸಖತ್‌ ಮಿಂಚುತ್ತಲೇ ಇರುತ್ತಾರೆ. ಇದೀಗ ಮತ್ತೆ ರೇಷ್ಮೆ ಸೀರೆಯಲ್ಲಿ ಅಪ್ಸರೆಯಂತೆ ಕಂಡಿದ್ದಾರೆ ನಮ್ರತಾ.

ಇದೀಗ ನಟಿ ಹೊಸದಾಗಿ ಫೋಟೊಗಳನ್ನ ಶೇರ್ ಮಾಡಿದ್ದು, ಕೇಸರಿ, ಕೆಂಪು, ಬಿಳಿ ಬಣ್ಣದ ಮೈಸೂರು ಸಿಲ್ಕ್ ಸೀರೆಯನ್ನುಟ್ಟಿದ್ದು, ಅದರ ಜೊತೆಗೆ ಕೇಸರಿ ಬಣ್ಣದ ಬ್ಲೌಸ್ ಧರಿಸಿದ್ದಾರೆ. ನಮೃತಾ ಗೌಡ ನೋಡಿದ ಅಭಿಮಾನಿಗಳು ಮಾತ್ರ ಬೆರಗಾಗಿದ್ದಾರೆ. ನಮೃತಾ ಗೌಡ ಬಾರ್ಡರ್ ಇರುವ ಸಾರಿ ಹಾಗೆಯೇ ಮ್ಯಾಚಿಂಗ್ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಸೀರೆ ಮಾತ್ರವಲ್ಲ ನಮ್ರತಾ ಹಾಕಿರುವ ಮೂಗುತಿ ಕೂಡ ಸಖತ್‌ ಹೈಲೈಟ್‌ ಆಗಿದೆ. ನಮ್ರತಾ ಅವರು ರೆಡಿಯಾಗಿರೋದನ್ನು ನೋಡಿ ಫ್ಯಾನ್ಸ್‌ ಇದೀಗ ನಟಿಗೆ ಕಂಕಣ ಭಾಗ್ಯ ಕೂಡಿ ಬಂತಾ ಎಂದು ಕಮೆಂಟ್‌ ಮೂಲಕ ಪ್ರಶ್ನೆ ಇಡುತ್ತಿದ್ದಾರೆ. ಥೇಟ್ ವಧುವಿನಂತೆ ಕಂಗೊಳಿಸುತ್ತಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ನಮ್ರತಾ ಗೌಡ ಈ ರೀತಿಯಾಗಿ ರೆಡಿಯಾಗಿದ್ದು, ಪೂಜೆಗೆ. ಈ ವಿಡೀಯೋ ಸಹ ಹಂಚಿಕೊಂಡಿದ್ದಾರೆ.

Share This Article
Leave a comment