ಬಿಗ್ಬಾಸ್ ಮನೆಯಲ್ಲಿ ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ ಸಂಚಲನ ಮೂಡಿಸಿದೆ. ನಿನ್ನೆಯ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್, ವೈಲ್ಡ್ಕಾರ್ಡ್ ಎಂಟ್ರಿಯಾಗಿ ಬರುತ್ತಿರುವ ಸ್ಪರ್ಧಿಗಳಾದ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ಅವರನ್ನು ವೀಕ್ಷಕರಿಗೆ ಪರಿಚಯ ಮಾಡಿ ಬಿಗ್ಮನೆಗೆ ಕಳುಹಿಸಿಕೊಟ್ಟಿದ್ದರು.
ಇದೀಗ ಇವರಿಬ್ಬರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದು, ದೊಡ್ಮನೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಬರ್ತಿದ್ದಂತೆಯೇ ಇಬ್ಬರು ಸ್ಪರ್ಧಿಗಳಿಗೂ ಬಿಗ್ಬಾಸ್ ಟಾಸ್ಕ್ ನೀಡಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಎಪಿಸೋಡ್ನ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಅದರಲ್ಲಿ ಹೊಸದಾಗಿ ಬಂದ ಇಬ್ಬರು ಸ್ಪರ್ಧಿಗಳು ಪ್ರತಿಸ್ಪರ್ಧಿಗಳ ಅಭಿಪ್ರಾಯವನ್ನ ಹೇಳಿ ನೆಲಕ್ಕೆ ಈಡುಗಾಯಿ ಹೊಡೆದಿದ್ದಾರೆ.
https://twitter.com/i/status/1858329280373248425
ಈಡುಗಾಯಿ ಹೊಡೆಯುವ ವೇಳೆ ನೀಡಿರುವ ಕಾರಣಗಳು, ಈಗಾಗಲೇ ಬಿಗ್ಬಾಸ್ ಮನೆಯಲ್ಲಿರುವ ಕೆಲವು ಸ್ಪರ್ಧಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಅಂತೆಯೇ ರಜತ್ ಅವರು, ತ್ರಿವಿಕ್ರಮ್ ಅವರನ್ನು ಟಾರ್ಗೆಟ್ ಮಾಡಿದಂತೆ ಕಾಣ್ತಿದೆ. ಇನ್ನು ಶೋಭಾ ಶೆಟ್ಟಿ ನೇರವಾಗಿ ಮಂಜು ಅವರ ನಂಬಿಕೆ ಮೇಲೆ ಹರಿಹಾಯ್ದಿದ್ದಾರೆ. ಅದೇ ರೀತಿ ಗೌತಮಿ ಜಾಧವ್ ವಿರುದ್ಧವೂ ಆರೋಪ ಮಾಡಿರುವ ಶೋಭಾ ಶೆಟ್ಟಿ, ನೀವು ಇನ್ನು ಮುಖವಾಡ ಹಾಕಿಕೊಂಡು ಇದ್ದೀರಿ ಎಂದಿದ್ದಾರೆ.