NASA ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಬಾಹ್ಯಾಕಾಶ ನೌಕೆಯು ಇಂದು ಭೂಮಿಗೆ ಮರಳುತ್ತಿದೆ. ಜೂನ್ ಮೊದಲ ವಾರದಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶಕ್ಕೆ ಕೊಂಡೊಯ್ದಿತ್ತು. ಬಳಿಕ ತಾಂತ್ರಿಕ ಸಮಸ್ಯೆ ಉಂಟಾಗಿ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಲು ಸಾಧ್ಯವಾಗಲಿಲ್ಲ. ಇದೀಗ ಬಾಹ್ಯಾಕಾಶ ನೌಕೆಯು ಸಿಬ್ಬಂದಿ ಇಲ್ಲದೆ ಭೂಮಿಗೆ ಮರಳುತ್ತಿದೆ.
ನಾಸಾ ಮಾಹಿತಿ ಪ್ರಕಾರ.. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ. ಸ್ಟಾರ್ಲೈನರ್ ಸೆಪ್ಟೆಂಬರ್ 6 ರಂದು ತಡರಾತ್ರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಟೇಕ್ ಆಫ್ ಆಗಿದೆ. ಅದು ಇಂದು ಭೂಮಿಗೆ ತಲುಪುತ್ತದೆ. ಜಗತ್ತಿನ ವಿಜ್ಞಾನಿಗಳ ಕಣ್ಣು ಈ ಕಾರ್ಯಾಚರಣೆ ಮೇಲೆ ನೆಟ್ಟಿದೆ.
ಸ್ಟಾರ್ಲೈನರ್ ಸೆಪ್ಟೆಂಬರ್ 6ರ ಮಧ್ಯರಾತ್ರಿ 3:30ಕ್ಕೆ ಬಾಹ್ಯಾಕಾಶ ಕೇಂದ್ರದಿಂದ ಟೇಕ್ ಆಫ್ ಆಗಿದೆ. ಇಂದು ಬೆಳಗ್ಗೆ 9:30ರ ಸುಮಾರಿಗೆ ಭೂಮಿಗೆ ಇಳಿಯಲಿದೆ. ಸ್ಟಾರ್ಲೈನರ್ ನ್ಯೂ ಮೆಕ್ಸಿಕೋದಲ್ಲಿ ಇಳಿಯಲಿದೆ.ಬೋಯಿಂಗ್‌ನ ಸ್ಟಾರ್‌ಲೈನರ್‌ನ ಲ್ಯಾಂಡಿಂಗ್ ಅನ್ನು ಲೈವ್ ಆಗಿ ವೀಕ್ಷಿಸಲು ಬಯಸಿದರೆ ಇದಕ್ಕಾಗಿ ಹಲವು ವೇದಿಕೆಗಳಿವೆ. ಲ್ಯಾಂಡಿಂಗ್ ಅನ್ನು NASA+, NASAದ ಮೊಬೈಲ್ ಅಪ್ಲಿಕೇಶನ್, NASA ನ ಅಧಿಕೃತ YouTube ಚಾನಲ್ ಅಥವಾ NASA ದ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
ಬಾಹ್ಯಾಕಾಶ ನೌಕೆ ಭೂಮಿಗೆ ಇಳಿಯೋದನ್ನು ನೋಡೋದು ಹೇಗೆ..?
Leave a comment
Leave a comment