‘ಬಾಹುಬಲಿ 3’ಗಾಗಿ ಮತ್ತೆ ಒಂದಾಗ್ತಾರಾ ರಾಜಮೌಳಿ, ಪ್ರಭಾಸ್?

public wpadmin

‘ಬಾಹುಬಲಿ’ ಪಾರ್ಟ್‌ 1 ಮತ್ತು 2ರ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಪ್ರಭಾಸ್ ಮತ್ತು ರಾಜಮೌಳಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ‘ಬಾಹುಬಲಿ 3’ ಕುರಿತು ಫ್ಯಾನ್ಸ್‌ಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. 

ಇತ್ತೀಚೆಗೆ ‘ಕಂಗುವ’ ಚಿತ್ರದ ನಿರ್ಮಾಪಕ ಕೆ.ಇ ಜ್ಞಾನವೇಲ್ ರಾಜ ಸಂದರ್ಶನವೊಂದರಲ್ಲಿ ಮಾತನಾಡಿ, ‘ಬಾಹುಬಲಿ 3’ ಚಿತ್ರ ಮಾಡುವ ಕುರಿತು ಪ್ಲ್ಯಾನ್ ನಡೆಯುತ್ತಿದೆ ಎಂದಿದ್ದಾರೆ. ಬಾಹುಬಲಿ 1 ಮತ್ತು 2 ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ಈಗ ಗ್ಯಾಪ್ ನಂತರ ಬಾಹುಬಲಿ ಪಾರ್ಟ್ 3ಗಾಗಿ ಪ್ಲ್ಯಾನಿಂಗ್ ನಡೆಯುತ್ತಿದೆ ಎಂದಿದ್ದಾರೆ.

‘ಬಾಹುಬಲಿ 3’ ಮಾಡುವ ಕುರಿತು ರಾಜಮೌಳಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಬಾಹುಬಲಿ 3’ಗಾಗಿ ಪ್ರಭಾಸ್ ಮತ್ತು ರಾಜಮೌಳಿ ಜೊತೆಯಾಗಿ ಮತ್ತೆ ಕೆಲಸ ಮಾಡುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದಿದೆ.

ಇನ್ನೂ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆಗಿನ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಪ್ರಭಾಸ್ ಅವರು ‘ಕಣ್ಣಪ್ಪ’ ಮತ್ತು ‘ದಿ ರಾಜ ಸಾಬ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಬಾಹುಬಲಿ ಸೀಕ್ವೆಲ್ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.

Share This Article
Leave a comment