ಬಾಬಾ ಸಿದ್ದಿಕಿ ಮೇಲಿನ ದಾಳಿಯ ನಂತರ ಸಲ್ಮಾನ್ ಖಾನ್ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೂಲಗಳ ಪ್ರಕಾರ, ಆರೋಪಿಯು ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಸಲ್ಮಾನ್‌ನನ್ನು ಕೊಲ್ಲಲು ಲಾರೆನ್ಸ್ ಗ್ಯಾಂಗ್ ಬಹಳ ದಿನಗಳಿಂದ ಯತ್ನಿಸುತ್ತಿದೆ. ಈ ವರ್ಷದ ಆರಂಭದಲ್ಲಿ, ಸಲ್ಮಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು, ಈ ಗ್ಯಾಂಗ್ ಅದರ ಜವಾಬ್ದಾರಿಯನ್ನು ತೆಗೆದುಕೊಂಡಿತು. ಸಲ್ಮಾನ್ ಬಾಬಾ ಸಿದ್ದಿಕಿ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಆ ನಿಟ್ಟಿನಲ್ಲಿ ಈಗ ಸಲ್ಮಾನ್ ಖಾನ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
ಎನ್‌ಸಿಪಿಯ ಹಿರಿಯ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಬೈನ ಬಾಂದ್ರಾ ಪೂರ್ವದಲ್ಲಿ ಅವರ ಕೊಲೆ ನಡೆದಿದ್ದು, ಇಡೀ ನಗರದಲ್ಲಿ ಸಂಚಲನ ಮೂಡಿಸಿದೆ. ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಬಾಬಾ, ಅವರ ಮಗ ಮತ್ತು ಶಾಸಕರ ಮೇಲೆ ಶೂಟರ್‌ಗಳು ಗುಂಡಿನ ದಾಳಿ ನಡೆಸಿದ್ದರು.
ಬಿಷ್ಣೋಯ್ ಜೊತೆ ಲಿಂಕ್! ಆರೋಪಿಗಳೇನಂದ್ರು?
ವಾಸ್ತವವಾಗಿ ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಎಳೆಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಪರ್ಕ ಹೊಂದಿದಂತಿದೆ. ಪೊಲೀಸ್ ಮೂಲಗಳ ಪ್ರಕಾರ, ಸಿದ್ದಿಕಿಯ ಮೇಲೆ ಗುಂಡು ಹಾರಿಸಿದ ಆರೋಪದಲ್ಲಿ ಬಂಧಿತರಾದ ಇಬ್ಬರೂ ಆರೋಪಿಗಳು ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ.
ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಬೆದರಿಕೆ ಬಂದಿರುವ ಘಟನೆ ಹಲವಾರು ಸಲ ನಡೆದಿದೆ. ಈಗಾಗಲೇ ನಟನ ಮೇಲೆ ಹಲವು ಸಲ ಬೆದರಿಕೆ ಬಂದಿದ್ದು, ಈಗ ಈ ಒಂದು ಘಟನೆ ಇನ್ನಷ್ಟು ತೀವ್ರವಾಗುತ್ತಿದ್ದು ಸಲ್ಮಾನ್ ಆಪ್ತರೇ ಗುಂಡಿಗೆ ಬಲಿಯಾಗಿದ್ದಾರೆ. ನಟ ಸಲ್ಮಾನ್ ಅವರು ಬಿಗ್ಬಾಸ್ ವೀಕೆಂಡ್ ಎಪಿಸೋಡ್ ಶೂಟಿಂಗ್ ನಲ್ಲಿಸಿ ಆಸ್ಪತ್ರೆಯತ್ತ ದೌಡಾಯಿಸಿದ್ದರು.