‘ರಾಮಾಚಾರಿ’ ಸೀರಿಯಲ್ ಮೂಲಕ ಮನೆಮಾತಾಗಿದ್ದ ಚಾರು ಅಲಿಯಾಸ್ ಮೌನ ಗುಡ್ಡೆಮನೆ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಲಗ್ಗೆ ಇಟ್ಟಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಎನ್ನುತ್ತಾ ಚಿತ್ರರಂಗಕ್ಕೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಕಿರುತೆರೆಯಲ್ಲಿ ಚಾರು ಎಂದೇ ಫೇಮಸ್ ಆಗಿರುವ ಕುಡ್ಲದ ಕುವರಿ ಮೌನ ಈಗ ಸಿನಿಮಾವೊಂದರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೀರಿಯಲ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನುಗೆ ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ.
ತಮ್ಮ ಮೊದಲ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಮಾಡಿ, ನನ್ನ ಕನಸುಗಳು ನನಸಾಗಲು ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಮೊದಲ ಸಿನಿ ಪ್ರಯಾಣಕ್ಕೆ ಬೆಂಬಲ ನೀಡಿ ಎಂದು ಬರೆದುಕೊಂಡಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಫ್ಯಾನ್ಸ್ ಶುಭಕೋರಿದ್ದಾರೆ. ಇನ್ನೂ ಮೌನ ನಟಿಸುತ್ತಿರುವ ಈ ಚಿತ್ರವನ್ನು ಸಂತೋಷ್ ಕುಮಾರ್ ಎ.ಕೆ ಮತ್ತು ವಿದ್ಯಾ ನಿರ್ಮಾಣ ಮಾಡುತ್ತಿದ್ದು, ಕೆ. ರಾಮನಾರಾಯಣ್ ಚಿತ್ರ ನಿರ್ದೇಶನ ಮಾಡಿದ್ದಾರೆ.