ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ 4ರಂದು 24ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈ ಒಂದು ಚಾರ್ಜ್ ಶೀಟ್ನಲ್ಲಿ ಇಡೀ ಪ್ರಕರಣದ ಪ್ರಮುಖ, ಹಾಗೂ ಚಿಕ್ಕ ಚಿಕ್ಕ ಮಾಹಿತಿಯನ್ನು ಕೂಡಾ ಇಲ್ಲಿ ದಾಖಲಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಿಂದ ಶುರು ಮಾಡಿದಂತೆ, ಎಫ್ಎಸ್ಎಲ್ ರಿಪೋರ್ಟ್‌ಗಳು, ವೈದ್ಯಕೀಯ ವರದಿಗಳು, ಪಂಚನಾಮೆ ಪ್ರತಿಗಳು, ಮಹಜರು ಕಾಪಿಗಳು, ಆರೋಪಿಗಳ ಹೇಳಿಕೆ ಕಾಪಿಗಳು, ಸಾಕ್ಷಿಗಳ ಹೇಳಿಕೆ, ಕಸ್ಟಡಿ ವೇಳೆ ಆರೋಪಿಗಳ ವೈದ್ಯಕೀಯ ತಪಾಸಣೆ ಪ್ರತಿಗಳು, ಸಾಕ್ಷ್ಯಾಧಾರಗಳ ಪ್ರತಿಗಳು ಸೇರಿದಂತೆ ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡ 3991 ಪುಟಗಳುಳ್ಳ 9 ಸಂಪುಟಗಳ 10 ಕಡತಗಳನ್ನು ಒಳಗೊಂಡಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ಅಪ್ಡೇಟ್ಗಳು ಹೊರಗೆ ಬೀಳುತ್ತಲೇ ಇವೆ. ಡಿ ಗ್ಯಾಂಗ್‌ನ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳು ರಿವೀಲ್ ಆಗಿವೆ. ತನಿಖೆ ವೇಳೆ ಆರೋಪಿ ಮೊಬೈಲ್ ನಲ್ಲಿ ರೇಣುಕಾಸ್ವಾಮಿಯ ಫೋಟೋ ಪತ್ತೆಯಾಗಿತ್ತು, ಒಂದು ಪೋಟೊ ಪವನ್ ಮೊಬೈಲ್‌ನಲ್ಲಿ, ಇನ್ನೊಂದು ಪೋಟೊ ಪ್ರತ್ಯಕ್ಷದರ್ಶಿ ಬಳಿ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯಿಂದ ವಿನಯ್‌ಗೆ ಪೋಟೊ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಈತನ್ಮಧ್ಯೆ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ 3991 ಪುಟಗಳ ಗಾತ್ರ ನೋಡಿ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ‘ಅಷ್ಟೊಂದು ಸಾಕ್ಷಿಗಳಾ’ ಎಂದು ಹೌಹಾರಿದ್ದು ಸುದ್ದಿಯಾಗಿತ್ತು. ಅದರ ನಂತರ ಮಾನಸಿಕವಾಗಿ ಕುಗ್ಗಿರುವ ದರ್ಶನ್ ಜಾಮೀನು ಸಿಗುವ ಬಗ್ಗೆ ಆತಂಕಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ರೇಣುಕಾಸ್ವಾಮಿ ಪ್ರಕರಣದ ಒಂದೊಂದೇ ಫೋಟೋಗಳು ರಿಲೀಸ್ ಆಗುತ್ತಿದ್ದು, ಇದು ದರ್ಶನ್‌ಗೆ ಮತ್ತಷ್ಟು ಚಿಂತೆ ಹೆಚ್ಚಿಸಿದೆ ಎನ್ನಲಾಗಿದೆ. ನಾಳೆ ಜಾಮೀನುಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರಾದರೂ ಮತ್ತೊಂದೆಡೆ ಈಗ ವೈರಲ್ ಆಗುತ್ತಿರುವ ಪೋಟೋಗಳ ಬಗ್ಗೆ ನಟ ದರ್ಶನ್‌ಗೆ ಆತಂಕ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಲವಾದ ಸಾಕ್ಷಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಆಗಿರುವುದರಿಂದ ಜಾಮೀನು ಸಿಗುತ್ತೋ ಇಲ್ವೋ ಅನ್ನೋ ಆತಂಕದಲ್ಲಿ ದರ್ಶನ್ ಇದ್ದು, ಇದೇ ಚಿಂತೆಯಲ್ಲಿ ದಿನದಿಂದ ದಿನಕ್ಕೆ ದರ್ಶನ್ ಮಾನಸಿಕವಾಗಿ ಕುಗ್ಗುತ್ತಿದ್ದಾರೆ, ದಿನವಿಡೀ ಜಾಮೀನು ಗುಂಗಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.