ಕನ್ನಡದ ‘ಬಿಗ್ ಬಾಸ್ ಸೀಸನ್ 11’ ಬಹಳ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದ್ದು, ‘ಬಿಗ್ ಬಾಸ್ ಸೀಸನ್ 11’ರ ಶುರುವಾಗಿ ಒಂದು ವಾರ ಕಳೆದಿದೆ.
ಇನ್ನು ವಾರಾಂತ್ಯ ಆಗಿರುವುದರಿಂದ ಕಿಚ್ಚ ಸುದೀಪ್ ಅವರು ವಾರದ ಕತೆಗೆ ವೇದಿಕೆಗೆ ವಿಭಿನ್ನವಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಚಪ್ಪಲಿ ಧರಿಸದೇ ಬರಿಗಾಲಿನಲ್ಲಿ ಸುದೀಪ್ ವೇದಿಕೆ ಏರಿದ್ದಾರೆ.
ಹೌದು, ವೇದಿಕೆಗೆ ಬಂದಿದ್ದ ಸುದೀಪ್ ಅವರು ಮೊದಲು ಹೇಳಿದ್ದ ಮಾತು, ಅಮ್ಮ ಓಕೆನಾ ಗ್ರೇ ಕಲರ್ ಎಂದಿದ್ದಾರೆ. ಬರಿಗಾಲು ನವರಾತ್ರಿ ಅಂತ ಹೇಳಿ ಶೋ ಶುರು ಮಾಡಿದ್ದಾರೆ.
ಇನ್ನೂ ನವರಾತ್ರಿಯಲ್ಲಿ ಕಿಚ್ಚ ಸುದೀಪ್ ಅವರು 9 ದಿನವು ಒಂದು ಹೊತ್ತಿನ ಊಟ ಸೇವಿಸುತ್ತಾರೆ. ಶೂಟಿಂಗ್ ಸಮಯದಲ್ಲೂ ಕಠಿಣ ವ್ರತ ಆಚರಿಸುವ ಸುದೀಪ್ ಅವರು ಈ ವರ್ಷವೂ ನವರಾತ್ರಿ ವ್ರತವನ್ನು ಆಚರಿಸುತ್ತಿದ್ದಾರೆ.
ನವರಾತ್ರಿ ನಿಮಿತ್ತ ಸುದೀಪ್ ಅವರು ಬೂದು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಬಂದಿದ್ದಾರೆ. ಜೊತೆಗೆ ಹಬ್ಬದಂದು ವೇದಿಕೆಗೆ ಚಪ್ಪಲಿಯನ್ನು ಹಾಕಿಕೊಳ್ಳದೇ ಶೋ ನಿರೂಪಣೆ ಮಾಡಿದ್ದಾರೆ. ಇನ್ನೂ ಶನಿವಾರ (ಅ.5) ಗ್ರೇ ಕಲರ್ ಧಿರಿಸಿನಲ್ಲಿ ನಟ ಮಿಂಚಿದ್ರೆ, ಭಾನುವಾರದ ಸಂಚಿಕೆಯಲ್ಲಿ (ಅ.6) ಕೇಸರಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ.
ಇನ್ನೂ ಕೆಲಸದ ನಡುವೆಯೂ ವ್ರತದ ಮೇಲಿರುವ ಸುದೀಪ್ ನಿಷ್ಠೆಯನ್ನು ಫ್ಯಾನ್ಸ್ ಹಾಡಿಹೊಗಳಿದ್ದಾರೆ.