ಪ್ರಿಯಕರನನ್ನೇ ಟ್ರ್ಯಾಪ್ ಮಾಡಿದ್ದಳಂತೆ ಮಹಾಲಕ್ಷ್ಮಿ! ಬಗೆದಷ್ಟು ಬೆಳಕಿಗೆ ಬರ್ತಿದೆ ಕೊಲೆಯ ರಹಸ್ಯ!

public wpadmin

ಬೆಂಗಳೂರು: ಮಹಾಲಕ್ಷ್ಮಿಕೊಲೆಯಾಗಿ ಒಂದು ತಿಂಗಳು ಆಗ್ತ ಬರ್ತಿದ್ದಂತೆ ಮಹಾಲಕ್ಷ್ಮಿಯ ಒಂದೊಂದೇ ಪುರಾಣ ಬಿಚ್ಕೊಳ್ಳೋದಕ್ಕೆ ಶುರುವಾಗಿದೆ.

ಹೌದು, ಒಡಿಶಾಗೆ ಹಾರಿದ್ದ ಬೆಂಗಳೂರು ಪೊಲೀಸರು , ಮಹಾಲಕ್ಷ್ಮಿ ಪ್ರೇಮ ಪುರಾಣವನ್ನ ಹೊತ್ತು ತಂದಿದ್ದಾರೆ. ಇನ್ಸ್ಟಾ ಗ್ರಾಂನಲ್ಲಿ ನಡು ಬಳುಕುಸ್ತಿದ್ದ ವಯ್ಯಾರಿಗೆ ಕಾಸೂ ಬೇಕು, ಪ್ರಾಯದ ಕುಮಾರನೂ ಬೇಕು. ಸಿಂಗಲ್ ಬೆಡ್ ರೂಂ ಮನೆ ಮಾಡ್ಕೊಂಡಿದ್ದವಳು, ಸಿಂಗಲ್ ಆಗಿಯೇ ಇದ್ದಿದ್ರೆ ಇವತ್ತು ಈ ಪರಿಸ್ಥಿತಿ ಬರ್ತಿರ್ಲಿಲ್ಲ.

ಇನ್ನು ಮುಕ್ತಿ ಹಾಗೂ ಮಹಾಲಕ್ಷ್ಮಿ ಒಂದೇ ಕಡೆ ಕೆಲಸ ಮಾಡ್ತಿದ್ದರು. ಈಕೆ ಸೇಲ್ಸ್ ಗರ್ಲ್ ಆಗಿದ್ರೆ, ಮುಕ್ತಿ ಸ್ಟೋರ್ ಮ್ಯಾನೇಜರ್ ಆಗಿದ್ದ. ಹೀಗಾಗಿಯೇ ಪ್ರೇಮ ಪಕ್ಷಿಗಳ ಪ್ರಣಯ ಗೀತೆ ಜೋರಾಗಿಯೇ ನಡೀತಿತ್ತು. ಆದ್ರೆ, ದಿನ ಕಳೀತಿದ್ದಂತೆ ಮಹಾಲಕ್ಷ್ಮಿಯ ಜಾಲಕ್ಕೆ ಸಿಲುಕಿದವ್ನು, ಲಕ್ಷ ಲಕ್ಷ ಹಣ ಸುರಿದಿದ್ನಂತೆ.
ಮುಕ್ತಿ ಹೆತ್ತವರೇ ಹೇಳ್ಕೊಂಡಿರೋ ಪ್ರಕಾರ, ಮಹಾಲಕ್ಷ್ಮಿಗೆ ಏನಿಲ್ಲ ಅಂದ್ರೂ ಏಳೆಂಟು ಲಕ್ಷ ಹಣ ಖರ್ಚು ಮಾಡಿದ್ನಂತೆ. ಅಷ್ಟೇ ಅಲ್ಲ ಮುಕ್ತಿ ಬಳಿಯಿದ್ದ ಬಂಗಾರದ ಉಂಗುರ ಹಾಗೂ ಬಂಗಾರದ ಸರವನ್ನ ಕಸಿದುಕೊಂಡಿದ್ದಳಂತೆ. ಹೀಗಾಗಿ ಈ ಎಲ್ಲಾ ವಿಷ್ಯವನ್ನ ಮುಕ್ತಿ, ತನ್ನ ಹೆತ್ತವರ ಬಳಿ ಹೇಳ್ಕೊಂಡಿದ್ದನಂತೆ. ಯಾವಾಗ ಮಗನ ಪರಿಸ್ಥಿತಿ ಹೀಗಾಗಿದೆ ಅನ್ನೋದು ತಾಯಿಗೆ ಗೊತ್ತಾಯ್ತೋ, ಮೊದಲು ಬೆಂಗಳೂರು ಬಿಟ್ಟು ಊರಿಗೆ ಬಾ ಅಂತಾ ಎಂದಿದ್ದಳಂತೆ. ಅವತ್ತು ಏನಾದ್ರು ಮುಕ್ತಿ ತಾಯಿ ಮಾತು ಕೇಳಿದ್ರೆ, ಇವತ್ತು ಈ ಸ್ಥಿತಿಯೇ ಬರ್ತಿರಲಿಲ್ಲ.
ಇನ್ನು ಮಹಾಲಕ್ಷ್ಮಿ ಕೊಲೆ ಕೇಸ್ನ ಸಂಪೂರ್ಣ ಮಾಹಿತಿ ಕಲೆಹಾಕಿರೋ ಪೊಲೀಸ್ರೂ, ಒಡಿಶಾಗೂ ಹೋಗಿ ಮಹತ್ವದ ಸಾಕ್ಷಿ ಕಲೆಕ್ಟ್ ಮಾಡಿದ್ದಾರೆ. ಮಹಾಲಕ್ಷ್ಮಿ ಕೊಂದಿದ್ದು ಮುಕ್ತಿಯೇ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ ಚಾರ್ಜ್ಶೀಟ್ ಸಲ್ಲಿಸೋದಕ್ಕೆ ಮುಂದಾಗಿದ್ದಾರೆ.

Share This Article
Leave a comment