ನವದೆಹಲಿ: ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿನ ಸಿಆರ್‌ಪಿಎಫ್ ಶಾಲೆಯ (CRPF) ಬಳಿ ನಡೆದ ಸ್ಫೋಟಕ್ಕೆ ಖಲಿಸ್ತಾನಿ ನಂಟಿದ್ಯಾ ಎಂಬ ಶಂಕೆ ಈಗ ಎದ್ದಿದೆ.
ಭಾರತೀಯ ಏಜೆಂಟರು ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಸ್ಫೋಟ ನಡೆಸಿದ್ದೇವೆ ಎಂದು ಪಾಕಿಸ್ತಾನದ ಟೆಲಿಗ್ರಾಂ ಚಾನೆಲ್‌ನಲ್ಲಿ ಖಲಿಸ್ತಾನಿ ಗುಂಪು ಹೇಳಿಕೊಂಡಿದೆ.
ಭಾನುವಾರ ನಡೆದ ಸ್ಫೋಟದ (Blast) ತೀವ್ರತೆಗೆ ಹತ್ತಿರದಲ್ಲಿದ್ದ ಕಟ್ಟಡಗಳು ಅದುರಿವೆ. ಸ್ಫೋಟದ ಶಬ್ಧ ಸುಮಾರು 2 ಕಿ.ಮೀ ದೂರದವರೆಗೆ ಕೇಳಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ.
ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ಈ ಕೃತ್ಯ ಎಸಗಲಾಗಿದೆ. ಬಾಲ್ ಬೇರಿಂಗ್ ಇರಲಿಲ್ಲ. ಟೈಮರ್ ಅಥವಾ ರಿಮೋಟ್‌ನಿಂದ ಇದನ್ನು ನಿಯಂತ್ರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.