ಪ್ರತಿದಿನ ಇದನ್ನು ಕುಡಿಯಿರಿ, ತೂಕ ಇಳಿಯೋದು ಗ್ಯಾರಂಟಿ!

public wpadmin

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಯನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅಧಿಕ ತೂಕ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ಅನೇಕ ರೀತಿಯಲ್ಲಿ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಆದ್ರೆ ಎಷ್ಟೇ ಪ್ರಯತ್ನಪಟ್ಟರೂ ತೂಕ ಕಡಿಮೆ ಆಗೋದೆ ಇಲ್ಲ. ಇನ್ನು ಕೆಲವರು ತೂಕ ಇಳಿಸಲು ನಾನಾ ರೀತಿಯಲ್ಲಿ ಡಯೆಟ್​ ಮಾಡುತ್ತಾರೆ. ಈ ಪ್ರಯತ್ನಗಳ ನಂತರವೂ ಕೆಲವೊಬ್ಬರ ತೂಕ ಇಳಿಕೆಯಾಗುತ್ತೆ. ಆದ್ರೆ ಇನ್ನೂ ಕೆಲವರ ತೂಕ ಕಡಿಮೆ ಆಗೋದೆ ಇಲ್ಲ.

ತೂಕ ಇಳಿಸಲು ನೀವು ಜಿಮ್​, ವಾಕಿಂಗ್ ಹೋಗಬೇಕಂತನೇ ಇಲ್ಲ. ಇಲ್ಲಿ ನಾವು ನೀಡುವ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಈ ಒಂದು ಪಾನೀಯ ಕುಡಿದ್ರೆ ಸಾಕು ನಿಮ್ಮ ತೂಕ ಇಳಿಸುವ ಪ್ರಕ್ರಿಯೆಗೆ ಸಹಕಾರಿಯಾಗುತ್ತೆ. ನೈಸರ್ಗಿಕ ಪಾನೀಯವಾದ ಎಳನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುವ ಪಾನೀಯವಾಗಿದೆ. ಹಳ್ಳಿ, ನಗರ ಹೀಗೆ ಎಲ್ಲೆಡೆ ಜನರು ಇದನ್ನು ಕುಡಿಯಲು ಇಷ್ಟಪಡುತ್ತಾರೆ. ನಿತ್ಯ ಎಳನೀರನ್ನು ಕುಡಿದರೆ ನಮ್ಮ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ. ಇದಲ್ಲದೇ ಎಳನೀರನ್ನು ಕುಡಿಯುವುದರಿಂದ ನೀವು ತೂಕವನ್ನು ಸಹ ಕಳೆದುಕೊಳ್ಳಬಹುದು.

ಈ ಬಗ್ಗೆ ಖ್ಯಾತ ಪೌಷ್ಟಿಕತಜ್ಞ ಆಯುಷಿ ಯಾದವ್ ಮಾತನಾಡಿದ್ದು, ಎಳನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ದೇಹವು ಆರೋಗ್ಯವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಮತ್ತು ರಿಫ್ರೆಶ್ ಮಾಡುತ್ತದೆ ಎಂದು ತಿಳಿಸಿದ್ದಾರೆ. ಎಳನೀರಿನಿಂದ ತೂಕವನ್ನು ಕಳೆದುಕೊಳ್ಳುವುದು ಹೇಗೆ?: ಎಳನೀರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ, ಇದು ಸಣ್ಣ ಪ್ರಮಾಣದ ಕಾರ್ಬೋಹೈಡ್ರೇಟ್ಗಳನ್ನು ಸಹ ಹೊಂದಿರುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಎಳನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಒಮ್ಮೆ ಎಳನೀರು ಕುಡಿದ ನಂತರ, ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಈ ಕಾರಣದಿಂದಾಗಿ ನಾವು ಅನಗತ್ಯವಾದ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತೇವೆ. ಈ ಕಾರಣಗಳಿಂದ ತೂಕ ಕ್ರಮೇಣ ಕಡಿಮೆಯಾಗುತ್ತದೆ. ಎಳನೀರು ಹಣ್ಣಿನ ರಸಕ್ಕಿಂತ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಹೆಚ್ಚು ಖನಿಜಗಳನ್ನು ಹೊಂದಿರುತ್ತದೆ.

ಎಳನೀರನ್ನು ಕುಡಿಯಲು ಸರಿಯಾದ ಸಮಯ: ನೀವು ಯಾವ ಸಮಯದಲ್ಲಿ ಬೇಕಾದರೂ ಎಳನೀರನ್ನು ಕುಡಿಯಬಹುದು. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಬೆಳಗ್ಗೆ ಹೊತ್ತು ಎಳನೀರನ್ನು ಕುಡಿಯುವುದು ಇನ್ನೂ ಉತ್ತಮವೆಂದು ಪರಿಗಣಿಸಲಾಗಿದೆ. ನೀವು ಬೆಳಗ್ಗೆ ಹೊತ್ತು ಎಳ ನೀರನ್ನು ಕುಡಿದರೆ, ಇದರ ಪರಿಣಾಮ ನಿಮಗೆ ದಿನವಿಡೀ ತಿಳಿಯುತ್ತದೆ. ಅಲ್ಲದೇ ದೇಹವು ದಿನವಿಡೀ ತಾಜಾವಾಗಿರುತ್ತದೆ

Share This Article
Leave a comment