‘ಪುಷ್ಪ 2’ನಲ್ಲಿ ಹೆಜ್ಜೆ ಹಾಕಲು 2 ಕೋಟಿ ಸಂಭಾವನೆ ಚಾರ್ಜ್ ಮಾಡಿದ್ರಾ ಶ್ರೀಲೀಲಾ?

public wpadmin

ಕನ್ನಡದ ‘ಭರಾಟೆ’ ಬೆಡಗಿ ಶ್ರೀಲೀಲಾ ಅವರು ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿರುವ ವಿಚಾರ ಈಗಾಗಲೇ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಈ ಬೆನ್ನಲ್ಲೇ ‘ಪುಷ್ಪ 2’ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ, 2 ಕೋಟಿ ರೂ. ಸಂಭಾವನೆಯನ್ನು ಚಾರ್ಜ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಸೊಂಟ ಬಳುಕಿಸಿದ್ದಕ್ಕೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಪಾರ್ಟ್‌ 2ನಲ್ಲಿ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿದ್ದಕ್ಕೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ 2 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂದು ಕಾದುನೋಡಬೇಕಿದೆ.

ಇನ್ನೂ ನ.10ರಂದು ನಟಿಯ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಸದ್ಯದಲ್ಲೇ ಶ್ರೀಲೀಲಾ ಐಟಂ ಸಾಂಗ್ ರಿಲೀಸ್ ಬಗ್ಗೆಯೂ ಅಪ್‌ಡೇಟ್ ಸಿಗಲಿದೆ.

ಅಂದಹಾಗೆ, ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಟ್ರೈಲರ್ ಇದೇ ನವೆಂಬರ್ 17ರಂದು ಸಂಜೆ 6:03ಕ್ಕೆ ರಿಲೀಸ್ ಆಗಲಿದೆ. ಹಾಗಂತ ಖುದ್ದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಐಕಾನ್ ಸ್ಟಾರ್ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Share This Article
Leave a comment