‘ಪುಷ್ಪಾ 2’ ಐಟಂ ಹಾಡಿಗೆ ಸೊಂಟ ಬಳುಕಿಸಿದ ಕನ್ನಡದ ನಟಿ ಶ್ರೀಲೀಲಾ

public wpadmin

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ ಡಿ.6ರಂದು ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಸಿಕ್ಕಿದೆ. ಈ ಸಿನಿಮಾದ ಐಟಂ ಹಾಡಿಗೆ ಕನ್ನಡದ ನಟಿ ಶ್ರೀಲೀಲಾ ಕುಣಿದಿದ್ದಾರೆ. ಆ ಫೋಟೋ ಲೀಕ್ ಕೂಡ ಆಗಿದೆ.

ಈ ಹಿಂದೆ ಈ ಹಾಡಿಗೆ ಬಾಲಿವುಡ್ ನಟಿಯರ ಹೆಸರೆಲ್ಲ ಕೇಳಿ ಬಂದಿತ್ತು. ಅದರಲ್ಲೂ ಶ್ರದ್ಧಾ ಕಪೂರ್ ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

‘ಪುಷ್ಪ 1’ರಲ್ಲಿ ಸಮಂತಾ ಡ್ಯಾನ್ಸ್ ಮಾಡಿದ್ದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದ ಗೆಲುವಿಗೆ ಕಥೆಯ ಜೊತೆ ಸಮಂತಾ ಡ್ಯಾನ್ಸ್ ಪ್ಲಸ್ ಆಗಿತ್ತು. ಹಾಗಾಗಿಯೇ ಪುಷ್ಪ 2ರಲ್ಲೂ ಇದನ್ನೇ ಫಾರ್ಮುಲಾ ಬಳಸುತ್ತಿದ್ದಾರೆ. ಈ ಹಿಂದೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಜಾನ್ವಿ ಕಪೂರ್, ತೃಪ್ತಿ ದಿಮ್ರಿ, ಶ್ರೀಲೀಲಾ ಹೀಗೆ ಅನೇಕರ ಹೆಸರು ಸದ್ದು ಮಾಡಿತ್ತು. ಈಗ ಶ್ರೀಲೀಲಾ ಕುಣಿದಿರೋದೇ ಪಕ್ಕಾ ಆಗಿದೆ.

ಇದೀಗ ‘ಸ್ತ್ರೀ 2’ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶ್ರದ್ಧಾಗೆ ಚಿತ್ರತಂಡ ಮಣೆ ಹಾಕಿದೆ ಎನ್ನಲಾಗಿತ್ತು. ಚಿತ್ರದಲ್ಲಿ ನಟಿಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕೇಳಲಾಗಿದೆ ಎಂದೂ ಹೇಳಲಾಗಿತ್ತು. ಆದರೆ, ಈಗ ಚಿತ್ರಣವೇ ಬದಲಾಗಿದೆ. ಈಗಾಗಲೇ ಹಾಡಿನ ಚಿತ್ರೀಕರಣ ಕೂಡ ಮುಗಿದಿದೆ.

Share This Article
Leave a comment