ಪುರುಷರೇ ಈ ಎಲೆಯ ರಸವೇ ನಿಮಗೆ ಸುಖದ ಪಾನಕ; ಕುಡಿದು ನಿಮಗಿರುವ ಕಂಟಕ ಕಳೆದುಕೊಳ್ಳಿ!

public wpadmin

ಲೈಂಗಿಕ ಜೀವನ ಉತ್ತಮಗಿಲ್ಲದಿದ್ದರೆ, ಜೀವನದಲ್ಲಿ ಯಾವುದು ಕೂಡ ಸರಿಯಾಗಿರುವುದಿಲ್ಲ. ಇದರಿಂದ ಸಂಸಾರದ ಜೀವನದಲ್ಲಿ ಸಾಮರಸ್ಯ ಇಲ್ಲದಂತಾಗಿ ಮನೆ ಮರ್ಯಾದೆ ಬೀದಿಗೆ ಬರುತ್ತಿದೆ. ಸಾಮಾನ್ಯವಾಗಿ ಪುರುಷರಿಗೆ ರಸಿಕತೆ ಎಷ್ಟಿರುತ್ತದೆಯೋ, ಅಷ್ಟೇ ಲೈಂಗಿಕ ಸಾಮರ್ಥ್ಯ ಕೂಡ ಇರಬೇಕು. ಆಗಷ್ಟೇ ತಮ್ಮ ಸಂಗಾತಿಯ ಜೊತೆ ಉತ್ತಮ ಲೈಂಗಿಕ ಬಾಂಧವ್ಯವನ್ನು ಹೊಂದಲು ಸಾಧ್ಯವಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಬದಲಾವಣೆಯ ಕಾರಣದಿಂದ ಜನರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆ. ಅದರಲ್ಲೂ ಪುರುಷರು ಇದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದು ಅವರ ಸಂಬಂಧದ ಮೇಲೆ ಸಹ ಪರಿಣಾಮ ಬೀರುತ್ತದೆ. ಲೈಂಗಿಕ ಜೀವನ ಚೆನ್ನಾಗಿರಲು ಯಾವುದೇ ಸಮಸ್ಯೆಗಳು ಇರಬಾರದು. ಅದರಲ್ಲೂ ಬಹುಮುಖ್ಯವಾಗಿ ಪುರುಷರಿಗೆ ದೀರ್ಘಕಾಲ ತಮ್ಮ ಸಂಗಾತಿಯನ್ನು ಖುಷಿಪಡಿಸುವ ತಂತ್ರ ಗೊತ್ತಿರಬೇಕು. ಹಾಗಾಗಿ ಉತ್ತಮ ಲೈಂಗಿಕ ಜೀವನವನ್ನು ಹೊಂದಲು ಪುರುಷರು ಉತ್ತಮ ಜೀವನ ಶೈಲಿ ಜೊತೆಗೆ, ಪೂರಕ ಆಹಾರಗಳನ್ನು ಸೇವಿಸಬೇಕು.

ವಿಶೇಷವಾಗಿ ನಾವಿಂದು ನಿಮಗೆ ತಿಳಿಸುವ ಎಲೆಯ ರಸವು ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಹಾಯಕವಾಗಿದೆ ಎಂದೇ ಹೇಳಬಹುದು. ಅನೇಕ ಪುರುಷರು ಇತ್ತೀಚಿನ ದಿನಗಳಲ್ಲಿ ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹವರು ಕಡಿಮೆ ಲೈಂಗಿಕ ಸಾಮಾರ್ಥ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀವು ಕೂಡ ಇದೆ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರಾ? ಸಂಗಾತಿಯೊಂದಿಗೆ ಅಥವಾ ಪ್ರೇಯಸಿಯನ್ನು ಭೇಟಿಯಾಗಲು ಇಷ್ಟ ಆಗ್ತಿಲ್ವಾ? ಡೇಂಟಿಂಗ್ ಮಾಡಲು ಹಿಂಜರಿಯುತ್ತಿದ್ದೀರಾ? ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ದುಬಾರಿ ಔಷಧಿಗಳು ಮತ್ತು ಮನೆಮದ್ದುಗಳ ಮೊರೆ ಹೋಗಿದ್ದರೂ ಉತ್ತಮ ಫಲಿತಾಂಶ ಸಿಗುತ್ತಿಲ್ಲ ಎಂದು ಆತಂಕಗೊಂಡಿದ್ದರೆ ಈ ಆಯುರ್ವೇದ ಮನೆಮದ್ದನ್ನು ಟ್ರೈ ಮಾಡಿ. ಇದು ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಉತ್ತಮ ಲೈಂಗಿಕ ಸಾಮಾರ್ಥ್ಯಕ್ಕಾಗಿ ವೀಳ್ಯೆದೆಲೆ ರಸ ಬೆಸ್ಟ್ ಎಂದೇ ಹೇಳಬಹುದು. ಒಂದೆಡೆ, ಜೀರ್ಣಕ್ರಿಯೆ, ಮಲಬದ್ಧತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ವೀಳ್ಯದೆಲೆಯ ರಸವು ತುಂಬಾ ಉಪಯುಕ್ತವಾಗಿರುವುದರೊಂದಿಗೆ ಕಾಮಾಸಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ವೀಳ್ಯದೆಲೆಯ ರಸ ಕಾಮವನ್ನು ಹೆಚ್ಚಿಸುತ್ತದೆ. ಅಂದರೆ, ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾದಾಗ ಇದರ ರಸ ಕುಡಿಯುವುದರಿಂದ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಈ ಪರಿಹಾರಗಳನ್ನು ದೀರ್ಘಕಾಲದವರೆಗೆ ನೀವು ಅನುಸರಿಸಬಹುದು. ದು ಹಳೆಯ ಸಂಪ್ರದಾಯವಾಗಿದ್ದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದೇ ಹೇಳಬಹುದು. ಹಿಂದಿನ ಕಾಲದಲ್ಲಿ ನವವಿವಾಹಿತರು ಹೆಚ್ಚಾಗಿ ವೀಳ್ಯೆದೆಲೆ ರಸ ಕುಡಿಯುತ್ತಿದ್ದರು. ಅಲ್ಲದೇ ಲೈಂಗಿಕ ಸಾಮಾರ್ಥ್ಯ ಹೆಚ್ಚಾಗಲಿ ಎಂಬ ಕಾರಣಕ್ಕಾಗಿಯೇ ನವವಿವಾಹಿತರಿಗೆ ಮದುವೆಯ ರಾತ್ರಿ ಪಾನೀಯವಾಗಿ ಈ ರಸವನ್ನು ನೀಡಲಾಗುತ್ತಿತ್ತು.

Share This Article
Leave a comment