ಮಹಿಳೆಯರಲ್ಲಿ ತಿಂಗಳ ಮುಟ್ಟಿನ ಅವಧಿ ಸರಿಯಾಗಿದ್ರೆ ಒಟ್ಟಾರೆ ಆರೋಗ್ಯ ಕೂಡ ಸರಿಯಾಗಿರುತ್ತದೆ ಎಂಬ ಮಾತಿದೆ. ಆದರೆ ಕೆಲವರು ವಿವಿಧ ರೋಗಗಳು/ಅಂಶಗಳ ಕಾರಣದಿಂದಾಗಿ ಎರಡು ಮೂರು ತಿಂಗಳಿಗೊಮ್ಮೆ ಆಗೋದು, ತಿಂಗಳ ತುಂಬುವುದರಲ್ಲಿ ಮುಟ್ಟಾಗುವಂತಹ ಇರ್ರೆಗ್ಯುಲರ್ ಪೀರಿಯಡ್ಸ್ ಅನ್ನು ಅನುಭವಿಸುತ್ತಾರೆ. ನಿಮ್ಮ ಪೀರಿಯಡ್ಸ್ ಪ್ರತಿ 24 ರಿಂದ 38 ದಿನಗಳಿಗೊಮ್ಮೆ ಬಂದರೆ ಅದನ್ನು ರೆಗ್ಯುಲರ್ ಪೀರಿಯಡ್ಸ್ ಎಂದು ಪರಿಗಣಿಸಲಾಗುತ್ತದೆ, ಅದೇ ಈ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದ್ರೆ ಅದನ್ನು ಅನಿಯಮಿತ ಮುಟ್ಟಿನ ಅವಧಿ ಎನ್ನಲಾಗುತ್ತದೆ.
ಅನಿಯಮಿತ ಮುಟ್ಟಿಗೆ ಕಾರಣವಾಗುವ ಅಂಶಗಳು
ರಕ್ತಹೀನತೆ
ತೂಕ ನಷ್ಟ ಅಥವಾ ಹೆಚ್ಚಳ
ಋತುಬಂಧ
ಥೈರಾಯ್ಡ್ ಅಸ್ವಸ್ಥತೆಗಳು
ಹಾರ್ಮೋನ್ ಅಸಮತೋಲನ
ಯಕೃತ್ತಿನ ರೋಗ
ಕ್ಷಯರೋಗ
ಗರ್ಭಪಾತ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳು
ಹೆಚ್ಚಿದ ವ್ಯಾಯಾಮ, ಧೂಮಪಾನ, ಆಲ್ಕೋಹಾಲ್, ಕೆಫೀನ್, ಪ್ರಯಾಣ, ಒತ್ತಡ ಮತ್ತು ಕೆಲವು ಔಷಧಿಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳಂತಹ ಜೀವನಶೈಲಿ ಪ್ರಚೋದಕಗಳು ಸಹ ಈ ಸಮಸ್ಯೆಗೆ ಕಾರಣವಾಗಬಹುದು.
ಹಣ್ಣಾಗದ ಪಪ್ಪಾಯ
ಬಲಿಯದ ಪಪ್ಪಾಯಿಯು ನಿಮ್ಮ ಪೀರಿಯಡ್ಸ್ ಅನ್ನು ಕ್ರಮಬದ್ಧಗೊಳಿಸುತ್ತದೆ. ಪಪ್ಪಾಯಿಯಲ್ಲಿರುವ ಕ್ಯಾರೋಟಿನ್ ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಉತ್ತೇಜಿಸುತ್ತದೆ.
ಇದು ನಿಮ್ಮ ಮುಟ್ಟನ್ನು ಕ್ರಮಬದ್ಧಗೊಳಿಸುತ್ತದೆ. ಕೆಲವು ತಿಂಗಳುಗಳವರೆಗೆ ಬಲಿಯದ ಪಪ್ಪಾಯಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಅರಿಶಿಣ
ಅರಿಶಿಣವು ಮುಟ್ಟನ್ನು ನಿಯಂತ್ರಿಸಲು ಮತ್ತು ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ಆ್ಯಂಟಿಸ್ಪಾಸ್ಮೊಡಿಕ್ ಮತ್ತು ಉರಿಯೂತದ ಗುಣಲಕ್ಷಣಗಳು ಮುಟ್ಟಿನ ನೋವನ್ನು ನಿವಾರಿಸುತ್ತದೆ.
ಅರಿಶಿಣವನ್ನು ಹಾಲು, ಜೇನುತುಪ್ಪ ಅಥವಾ ಬೆಲ್ಲದೊಂದಿಗೆ ಸೇವಿಸಿದಲ್ಲಿ ಅನಿಯಮಿತ ಪೀರಿಯಡ್ಸ್ ನಿವಾರಣೆಯಾಗುತ್ತದೆ.
ಅಲೋವೆರಾ ನಿಮ್ಮ ಹಾರ್ಮೋನುಗಳನ್ನು ನಿಯಂತ್ರಿಸುವ ಮೂಲಕ ನೈಸರ್ಗಿಕವಾಗಿ ಅನಿಯಮಿತ ಪೀರಿಯಡ್ಸ್‌ಗೆ ಮುಕ್ತಿ ಹಾಡುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು, ಅಲೋ ಎಲೆಯಿಂದ ತಾಜಾ ಅಲೋವೆರಾ ಜೆಲ್ ಅನ್ನು ಹೊರತೆಗೆಯಿರಿ, ಒಂದು ಟೀಚಮಚ ಜೇನುತುಪ್ಪವನ್ನು ಬೆರೆಸಿ, ತಿಂಡಿಗೂ ಮುನ್ನವೇ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಶುಂಠಿ
ಶುಂಠಿಯು ನಿಮ್ಮ ಋತುಚಕ್ರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಮತ್ತು ಪಿರಿಯಡ್ಸ್ ಸಮಯದಲ್ಲಿ ನೋವನ್ನು ನಿವಾರಿಸುತ್ತದೆ. ಶುಂಠಿಯ ಸೇವನೆಯು ಮುಟ್ಟಿನ ಸಮಯದಲ್ಲಿ ಹೋಗುವ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ನಿಮ್ಮ ಪೀರಿಯಡ್ಸ್ ಅನ್ನು ಕ್ರಮಬದ್ಧಗೊಳಿಸಲು ಜೀರಿಗೆ ನೀರನ್ನು ಕುಡಿಯಿರಿ. ಜೀರಿಗೆಯಲ್ಲಿರುವ ಪೋಷಕಾಂಶಗಳು ಮುಟ್ಟಿನ ಅವಧಿಯನ್ನು ಕ್ರಮಬದ್ಧಗೊಳಿಸುತ್ತದೆ, ಸೆಳೆತವನ್ನು ನಿವಾರಿಸುತ್ತದೆ.