ಕೋಲಾರ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯ ಪರಿಣಾಮ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಅದರಲ್ಲೂ ರೈತರು ಬೆಳೆದ ಬೆಳೆಗಳು ಮಳೆಯ ಹೊಡೆತಕ್ಕೆ ಕೊಚ್ಚಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಕೋಲಾರ ತಾಲೂಕು ಹೊದಲವಾಡಿ ಗ್ರಾಮದಲ್ಲಿ ಹೂ ತೋಟಕ್ಕೆ ನಿರಂತರ ಮಳೆಯಿಂದ ನೀರಿನಲ್ಲಿ ನೆನೆದು ಹೂವಿನ ತೋಟ ಕೊಳೆಯಲು ಆರಂಭಿಸಿದೆ. ಪರಿಣಾಮ ದೀಪಾವಳಿವರೆಗೂ ಹೂವಿನ ಬೆಳೆ ಇರುತ್ತದೆ ಎಂದು ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಜಡಿ ಮಳೆ ತಣ್ಣೀರೆರಚಿದೆ.
ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು ಹೂವು ತೋಟದಲ್ಲಿ ನೀರು ನಿಂತಿದ್ದು ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ದೀಪಾವಳಿ ಹಬ್ಬದ ಹಿನ್ನೆಲೆ ಹೂವಿಗೆ ಒಳ್ಳೆಯ ಬೆಲೆ ಬರುತ್ತದೆ. ಹಬ್ಬಕ್ಕಾಗಿಯೇ ತೋಟಕ್ಕೆ ಗೊಬ್ಬರ ನೀರು ಹಾಕಿ ಔಷಧ ಹಾಕಿ ಚೆನ್ನಾಗಿ ತೋಟವನ್ನು ಬೆಳೆಸಿ, ಹಬ್ಬದ ಸಮಯಕ್ಕೆ ಒಂದಷ್ಟು ಆದಾಯ ಮಾಡಿಕೊಳ್ಳಬಹುದು ಎಂದುಕೊಂಡಿದ್ದ ಹೂವು ಬೆಳೆಗಾರ ವೇಣು ಅವರಿಗೆ ನಿರಾಸೆಯಾಗಿದೆ.
ನಿರಂತರ ಮಳೆ- ಲಾಭದ ನಿರೀಕ್ಷೆಯಲ್ಲಿದ್ದ ಹೂವಿನ ಬೆಳೆಗಾರರು ಕಂಗಾಲು
Leave a comment
Leave a comment