ನಿಮ್ಮ ವಯಸ್ಸು ಯಾರಿಗೂ ಗೊತ್ತಾಗಲ್ಲ, ಅಷ್ಟು ಯಂಗ್ ಕಾಣ್ತೀರಾ! ಈ ಅಭ್ಯಾಸ ರೂಢಿಸಿಕೊಳ್ಳಿ

public wpadmin

ನಾವು ಭೇಟಿಯಾಗುವ ಕೆಲವು ವ್ಯಕ್ತಿಗಳು ತಮ್ಮ ವಯಸ್ಸಿಗಿಂತ ಚಿಕ್ಕವರಾಗಿರುತ್ತಾರೆ ಹಾಗೂ ಅವರ ತ್ವಚೆ ಕೂಡ ಕಾಂತಿಯುಕ್ತವಾಗಿ ಹದಿಹರೆಯದವರಂತೆ ಕಾಣಿಸುತ್ತಾರೆ. ಅಷ್ಟು ವಯಸ್ಸಾದರೂ ಇನ್ನು ಇವರು ಯುವಕ ಯುವತಿಯರಂತೆ ಕಾಣಿಸುತ್ತಿದ್ದಾರೆ, ಇದು ಹೇಗೆ ಸಾಧ್ಯ ಎಂದು ನಾವು ತಲೆಕೆಡಿಸಿಕೊಳ್ಳುತ್ತೇವೆ. ಇನ್ನು ಕೆಲವರು ವಯಸ್ಸೇ ಆಗುವುದಿಲ್ಲ ಎಂಬಂತೆ ಕಾಣಿಸುತ್ತಾರೆ. ನಾವು ಕೂಡ ಅವರಂತಿದ್ದರೆ ಎಷ್ಟು ಚೆಂದವೆಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತೇವೆ. ಆದರೆ ಇವರು ಇನ್ನು ಹದಿಹರೆಯದವರಂತೆ ಕಾಣುತ್ತಿದ್ದಾರೆ ಎಂದರೆ ಅದು ಅವರು ಅನುಸರಿಸುವ ಜೀವನಶೈಲಿಯ ಕೊಡುಗೆಯಾಗಿದೆ ಎಂದರೆ ನೀವು ನಂಬಲೇಬೇಕು.

ತಮ್ಮ ನಿಜವಾದ ವಯಸ್ಸಿಗಿಂತಲೂ ಕೆಲವರು ಕಿರಿಯರಾಗಿ ಕಾಣುತ್ತಾರೆ ಎಂದರೆ ಅವರು ಹೆಚ್ಚು ನೀರು ಕುಡಿಯುತ್ತಾರೆ ಹೀಗಾಗಿ ಅವರ ತ್ವಚೆ ಕೂಡ ಯವ್ವೌನಭರಿತವಾಗಿದೆ ಎಂಬ ಅರ್ಥವಾಗಿದೆ. ದಿನಕ್ಕೆ ಎಂಟು ಲೋಟಗಳಷ್ಟು ನೀರು ಕುಡಿಯಲೇಬೇಕು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಕರುಳಿನ ಚಲನೆಗೆ ಆಹಾರ ಜೀರ್ಣವಾಗಲು ನೀರು ಸೇವನೆ ಅತ್ಯಗತ್ಯವಾಗಿದೆ. ಇನ್ನು ನೀರಿನೊಂದಿಗೆ ತೇವಾಂಶಭರಿತ ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ ಹಣ್ಣುಗಳನ್ನು ಇವರು ಸಾಕಷ್ಟು ಸೇವಿಸುತ್ತಾರೆ. ತಮ್ಮ ತ್ವಚೆಯ ಹೈಡ್ರೇಶನ್ ಕಡೆಗೂ ಅವರ ಗಮನ ಹರಿಸುತ್ತಾರೆ.

ಇವರು ನಿದ್ದೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಯವ್ವೌನದ ಹಿಂದಿನ ಗುಟ್ಟೇ ಸಾಕಷ್ಟು ಪ್ರಮಾಣದ ನಿದ್ದೆಯಾಗಿದೆ ಎಂದವರು ಹೇಳುತ್ತಾರೆ. ನೀವು ಸರಿಯಾದ ನಿದ್ರೆ ಪಡೆದಾಗ ನಿಮ್ಮ ದೇಹಕ್ಕೆ ರಿಪೇರಿ ಹೊಂದಲು ಅವಕಾಶ ದೊರೆಯುತ್ತದೆ. ಈ ಸಮಯದಲ್ಲಿ ತ್ವಚೆಯ ಹೊಳೆಯುವಿಕೆ, ತಾಜಾತನ ಪ್ರಕ್ರಿಯೆ ಕೂಡ ನಡೆಯುತ್ತದೆ. ನಿದ್ದೆ ಕಡಿಮೆಯಾದಾಗ ಕಾರ್ಟಿಸೊಲ್ ಹೆಚ್ಚಾಗುತ್ತದೆ ಇದೊಂದು ಒತ್ತಡದ ಹಾರ್ಮೋನ್ ಆಗಿದ್ದು, ಇದರಿಂದ ಉರಿಯೂತ ಉಂಟಾಗುತ್ತದೆ ಹಾಗೂ ತ್ವಚೆಯ ಮೃದುತ್ವ ಹಾಗೂ ನಮ್ಯತೆಗೆ ಕಾರಣವಾಗಿರುವ ಕೊಲಜಿನ್ ವಿಘಟನೆಗೆ ಕಾರಣವಾಗುತ್ತದೆ. ನಿದ್ದೆ ಕಡಿಮೆಯಾಗುವುದರಿಂದ ನೀವು ಹೆಚ್ಚು ವಯಸ್ಸಾದವಂತೆ ಕಂಡುಬರುತ್ತೀರಿ ಹಾಗೂ ಇದು ತ್ವಚೆಯ ಆರೋಗ್ಯಕ್ಕೂ ಮಾರಕವೆಂದು ಅಧ್ಯಯನ ತಿಳಿಸುತ್ತದೆ. ಹಾಗಾಗಿ ನಿದ್ದೆಗೆ ಹೆಚ್ಚಿನ ಆದ್ಯತೆ ನೀಡಿ.

ತಮ್ಮ ವಯಸ್ಸಿಗಿಂತಲೂ ಯವ್ವನಭರಿತರಾಗಿ ಕಾಣುವವರು ಸಮತೋಲಿತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಸಿರು ಸೊಪ್ಪು, ತರಕಾರಿ, ಹಣ್ಣುಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸಂಸ್ಕರಿಸಿದ ಆಹಾರಗಳನ್ನು ಆದಷ್ಟು ಕಡಿಮೆ ಸೇವಿಸುತ್ತಾರೆ. ಸಿಹಿ ಪದಾರ್ಥಗಳನ್ನು ಕೂಡ ನಿಯಂತ್ರಣದಲ್ಲಿ ಸೇವಿಸುತ್ತಾರೆ. ಸಂಪೂರ್ಣ ಧಾನ್ಯ, ಕಾಳುಗಳ ಸೇವನೆಗೆ ಪ್ರಾಶಸ್ತ್ಯ ನೀಡುತ್ತಾರೆ. ನಿಮ್ಮ ವಯಸ್ಸಿಗಿಂತ ಯುವಕರಾಗಿ ನೀವು ಕಾಣಬೇಕು ಎಂದರೆ ನೀವು ಕೂಡ ಅಂತಹದ್ದೇ ಜೀವನ ಶೈಲಿ ಮಾರ್ಪಾಡುಗಳನ್ನು ಅಳವಡಿಸಿಕೊಂಡಿರಬೇಕಾಗುತ್ತದೆ. ಇವರು ಆದಷ್ಟು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾರೆ. ದೇಹವನ್ನು ಅತ್ತಿತ್ತ ಮೂವ್ ಮಾಡುತ್ತಿರುತ್ತಾರೆ. ದಿನದ ಒಂದಿಷ್ಟು ಹೊತ್ತನ್ನು ವ್ಯಾಯಾಮಕ್ಕೆ ಮೀಸಲಿಡುತ್ತಾರೆ.

Share This Article
Leave a comment